ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿಯಾಗಿಸಿದೆ ಮತ್ತು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರ ಖಾತೆಗಳಿಗೆ ಹಣವಿಲ್ಲ, ಆದರೆ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ಚುನಾವಣಾ ಅಕ್ರಮಗಳ ಮೂಲಕ ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆಯ ನಂತರ ಈ ಹಣ ಜಮೆಯನ್ನು ನಿಲ್ಲಿಸುತ್ತಾರೆ ಮತ್ತು ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯನ್ನು ರದ್ದುಗೊಳಿಸಿದ್ದಾರೆ ಎಂದು ದೇವೇಗೌಡರು ಆರೋಪಿಸಿದರು.
ನಿಖಿಲ್ ಕುಮಾರಸ್ವಾಮಿಯನ್ನು ವಿಧಾನಸೌಧಕ್ಕೆ ಕಳುಹಿಸಿ; ಅವರು ನಿಮ್ಮ ಪರವಾಗಿ ದನಿ ಎತ್ತುತ್ತಾರೆ. ನಾನು ರೈತನ ಮಗ, ನೀವು ರೈತನ ಮಕ್ಕಳು. ಇಗ್ಗಲೂರು ಅಣೆಕಟ್ಟಿನಿಂದ 17 ಕೆರೆಗೆ ನೀರು ಹರಿಸಿದ್ದಾರೆ. ಈ ಅಣೆಕಟ್ಟು ಇಲ್ಲದೇ ನೀರು ಹರಿಸಬಹುದಾಗುತ್ತಿತ್ತಾ? ಎಂದು ದೇವೇಗೌಡರು ಪ್ರಶ್ನಿಸಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ 1600 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ರೈತರ ಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಒತ್ತಾಸೆಯಿಂದ ಕುಮಾರಸ್ವಾಮಿ ದೆಹಲಿಗೆ ಹೋಗಿ ಸಚಿವರಾದರು ಎಂದೂ ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ಡಿ.ಕೆ. ಶಿವಕುಮಾರ್ ತನ್ನನ್ನು ಅಭ್ಯರ್ಥಿಯೆಂದು ಹೇಳಿದ್ದರು ಆದರೆ ನಿರೀಕ್ಷಿತ ದಿನದಂದು ತಮ್ಮ ತೀರ್ಮಾನ ಬದಲಾಯಿಸಿದರು. ಬಿಜೆಪಿ ಅಭ್ಯರ್ಥಿಯನ್ನು ʻಹೈಜಾಕ್ʼ ಮಾಡಿದರೆಂದು ದೇವೇಗೌಡರು ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿ 2028ರಲ್ಲಿ ಸ್ಪರ್ಧಿಸುತ್ತಾರೆ, ಪಕ್ಷವನ್ನು ಕಟ್ಟುವ ಉದ್ದೇಶ ಹೊಂದಿದ್ದಾರೆ. ಚನ್ನಪಟ್ಟಣದ ಹೆಣ್ಣು ಮಕ್ಕಳು ನಿರ್ಧಾರ ಮಾಡಿದರೆ ನಿಖಿಲ್ ಕುಮಾರಸ್ವಾಮಿ 100% ವಿಧಾನಸೌಧಕ್ಕೆ ಹೋಗುತ್ತಾರೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನು ಓದಿ –ಬೆಂಗಳೂರಿನ ಶೆಡ್‌ನಲ್ಲಿ ‘ಡಬಲ್ ಮರ್ಡರ್’ ಪ್ರಕರಣ: ಆರೋಪಿ ಬಂಧನ
ಚನ್ನಪಟ್ಟಣದಲ್ಲಿ ಪ್ರತಿ ತಿಂಗಳು ₹80 ಲಕ್ಷದಷ್ಟು ಹಾಲಿನ ಉತ್ಪಾದನೆ ಆಗುತ್ತದೆ. ಕರ್ನಾಟಕದಲ್ಲಿ ಹಾಲಿನ ಡೈರಿ ವ್ಯವಸ್ಥೆಯನ್ನು ತಂದದ್ದು ದೇವೇಗೌಡರದು. ಇಗ್ಗಲೂರು ಅಣೆಕಟ್ಟಿನಿಂದ ನೀರು ಸಿಗದೇ ಇರುವವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಮಾಡುತ್ತಿದ್ದಾರೆ.
More Stories
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ