March 17, 2025

Newsnap Kannada

The World at your finger tips!

WhatsApp Image 2023 06 21 at 7.06.52 PM 1

ಗೃಹಜ್ಯೋತಿ ಯೋಜನೆ: ಸರ್ಕಾರ ಹಣ ನೀಡದೆ ಹೋದರೆ ಗ್ರಾಹಕರೇ ಬಿಲ್ ತೀರಿಸಬೇಕಾ?

Spread the love

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಜನತೆಗೆ ಆಘಾತ ನೀಡುವ ಮಾಹಿತಿ ಬಹಿರಂಗವಾಗಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಸ್ಪಷ್ಟಪಡಿಸಿದಂತೆ, ಸರ್ಕಾರದಿಂದ ಅನುದಾನ ಲಭ್ಯವಾಗದೆ ಇದ್ದರೆ, ಗ್ರಾಹಕರೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಬಹುದು.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬೆಸ್ಕಾಂ ಎಂಡಿ ಶಿವಶಂಕರ, “ಯೋಜನೆಗಾಗಿ ಸರ್ಕಾರ ನಮಗೆ ಮುಂಗಡವಾಗಿ ಅನುದಾನ ನೀಡುತ್ತಿದೆ. ಸದ್ಯ ನಮ್ಮಲ್ಲಿ 50 ಕೋಟಿ ರೂಪಾಯಿ ಮುಂಗಡ ಹಣವಿದೆ. ಸರ್ಕಾರ ಈ ಅನುದಾನ ನೀಡದೆ ಹೋದರೆ, ಗ್ರಾಹಕರೇ ಹಣ ಪಾವತಿಸಬೇಕಾಗಬಹುದು” ಎಂದು ತಿಳಿಸಿದ್ದಾರೆ.

ಆದಾಗ್ಯೂ, ಸರ್ಕಾರ ಪ್ರತಿ ತಿಂಗಳು ಯೋಜನೆಗೆ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಪಾವತಿ ಮಾಡಬೇಕಾದ ಅಗತ್ಯ ಈಗಾಗಿಲ್ಲ. ಇದನ್ನು ಓದಿ –ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಹೊಸ ನಿಯಮಗಳು ಜಾರಿ – ಪ್ರಯಾಣಿಕರಿಗೆ ಪ್ರಮುಖ ಮಾಹಿತಿ

ಆದರೆ, ಸರ್ಕಾರ ಸಬ್ಸಿಡಿ ಹಣ ನೀಡದೆ ಇದ್ದರೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ನಿಯಮಗಳ ಪ್ರಕಾರ ಹಣ ವಸೂಲಿ ಮಾಡಬೇಕಾಗುತ್ತದೆ ಎಂದು ಬೆಸ್ಕಾಂ ಎಂಡಿ ಶಿವಶಂಕರ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!