ಗ್ರೇಟಾ ಟೂಲ್‌ಕಿಟ್‌ ಕೇಸ್‌ – ಬೆಂಗಳೂರಿನಲ್ಲಿ ಹೋರಾಟಗಾರ್ತಿ ಬಂಧನ

Team Newsnap
1 Min Read

ಗ್ರೇಟಾ ಥನ್ ಬರ್ಗ್ ಟೂಲ್‌ ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುವ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಫ್ರೈಡೆ ಫಾರ್ ಫ್ಯೂಚರ್ ಸಂಸ್ಥಾಪಕಿ ದಿಶಾ ರವಿ(21) ಬಂಧಿತ ಆರೋಪಿ.

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಿವಾಸದಲ್ಲಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಟೂಲ್‌ ಕಿಟ್‌ ಮೂಲಕ ದ್ವೇಷ ಉತ್ತೇಜಿಸಿದ ಆರೋಪದ ಅಡಿ ಬಂಧನ ಮಾಡಲಾಗಿದೆ.

ಗೂಗಲ್ ನಲ್ಲಿ ಡಾಕ್ಯುಮೆಂಟ್‌ ಪ್ರಕಟವಾದ ಬಳಿಕ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 124ಎ , 153 ಎ ಅಡಿ ಎಫ್ಐಆರ್‌ ದಾಖಲಿಸಿದ್ದರು. ಬಳಿಕ ಗೂಗಲ್‌ ಕಂಪನಿಗೆ ಪತ್ರ ಬರೆದು ಟೂಲ್‌ಕಿಟ್‌ ಬಗ್ಗೆ ಮತ್ತಷ್ಟು ಮಾಹಿತಿ ನೀಡುವಂತೆ ಕೋರಿದ್ದರು. ಗೂಗಲ್‌ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬಂಧನವಾಗಿದೆ.

ಬೆಂಗಳೂರಿನ ಕಾಲೇಜಿನಲ್ಲಿ ಎಂಬಿಎ ಪದವಿ ಓದಿರುವ ದಿಶಾ ರವಿ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಯ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್‌ ಕೋಚ್‌. ತಾಯಿ ಗೃಹಿಣಿಯಾಗಿದ್ದಾರೆ.

ಪ್ರತಿಭಟನೆ  ಬೆಂಬಲ ನೀಡಲು ಟೂಲ್ ಕಿಟ್ ಸೃಷ್ಟಿಸಿದ  ಪಡೆದ ಆರೋಪ ದಿಶಾ ರವಿ ಮೇಲಿದೆ. ಅಲ್ಲದೇ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಸಂಬಂದ ಹಲವಾರು ವಿದೇಶಿ ಸೆಲೆಬ್ರಿಟಿಗಳು ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ಈ ಪೈಕಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಟ್ವೀಟ್‌ ಮಾಡುವುದರ ಜೊತೆ ಜಾಗತಿಕ ಬೆಂಬಲ ನೀಡಬೇಕು ಎಂದು ಹೇಳಿ ಪ್ರತಿಭಟನೆಯ ಟೂಲ್‌ಕಿಟ್‌ ಇರುವ ಗೂಗಲ್‌ ಡಾಕ್ಯುಮೆಂಟ್‌ ಪ್ರಕಟಮಾಡಿದ್ದರು.

Share This Article
Leave a comment