ಕ್ರೀಡೆ

2ನೇ ಟೆಸ್ಟ್​ನಲ್ಲಿ ಭರ್ಜರಿ ಗೆಲುವು – ಟೆಸ್ಟ್​ ಸರಣಿ ವಶ : ದಾಖಲೆ ಬರೆದ ಕೊಹ್ಲಿ boys

ಮುಂಬೈ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.

ಭಾರತದ ಮಾರಕ ಬೌಲಿಂಗ್​​​​ ದಾಳಿಗೆ ನಡುಗಿದ ಪ್ರವಾಸಿ ನ್ಯೂಜಿಲೆಂಡ್​ ತಂಡ, ನಾಲ್ಕನೇ ದಿನದಾಟದ ಮೊದಲಾಧ೯ದಲ್ಲೇ ಸೋಲಿಗೆ ಶರಣಾಯಿತು.

ಆ ಮೂಲಕ ಹೆಚ್ಚು ರನ್​​​ಗಳಿಂದ ಗೆದ್ದ ದಾಖಲೆ ಕೂಡ ಬರೆಯಿತು. ಅಲ್ಲದೆ, ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನು 1-0 ಅಂತರದಲ್ಲಿ ಕೈ ವಶ ಮಾಡಿಕೊಂಡಿತು.

5 ವಿಕೆಟ್​ ನಷ್ಟಕ್ಕೆ 140ರನ್​​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಕಿವೀಸ್​ ಗೆಲುವಿಗೆ ಬೃಹತ್​​​​ 400 ರನ್​​ಗಳ ಅಗತ್ಯವಿತ್ತು.

ಆದರೆ ಭಾರತೀಯ ಬೌಲರ್​​​​ಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ದಿನದಾಟದ ಆರಂಭದಲ್ಲೇ ರಾಚಿನ್​ ರವೀಂದ್ರ, ಕೈಲ್​ ಜೆಮಿಸನ್, ಟಿಮ್​​ ಸೌಥಿ​​ಗೆ ಜಯಂತ್​ ಯಾದವ್​ ಗೇಟ್​ ಪಾಸ್​ ನೀಡಿದರು. ಅಷ್ಟರಲ್ಲಾಗಲೇ ಕಿವೀಸ್​​ 8 ವಿಕೆಟ್​​​ ಕಳೆದುಕೊಂಡು ತಂಡದ ಮೇಲಿನ ಹಿಡಿತವನ್ನ ಸಂಪೂರ್ಣ ಕಳೆದುಕೊಂಡಿತು.

9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಮರ್​ವಿಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ಇನ್ನು 36 ರನ್​​ಗಳಿಸಿ ಇವತ್ತಿಗೆ ಕ್ರೀಸ್​ ಕಾಯ್ದುಕೊಂಡಿದ್ದ ಹೆನ್ರಿ ನಿಕೋಲಸ್​, ಕೆಲ ಕಾಲ ಹೋರಾಡಿದರು. ಕೊನೆಯಲ್ಲಿ ಅಶ್ವಿನ್​​ ಬೌಲಿಂಗ್​​​ನಲ್ಲಿ ಸ್ಟಂಪ್​ ಔಟ್​ ಆದರು. ಅಶ್ವಿನ್​​​ 4, ಜಯಂತ್​ ಯಾದವ್ 4, ಅಕ್ಷರ್​ ಪಟೇಲ್ 1 ವಿಕೆಟ್ ಕಬಳಿಸಿ ಮಿಂಚಿದರು.

Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024