December 26, 2024

Newsnap Kannada

The World at your finger tips!

bi2

ಭಾರತೀಯ ಆಟಗಾರರ ಭರ್ಜರಿ ಆಟ – ಹೀನಾಯವಾಗಿ ಸೋತ ಇಂಗ್ಲೆಂಡ್‌ ಪಡೆ

Spread the love

ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಓವಲ್ ನಲ್ಲಿ ನಡೆದ 4 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ, 157ರನ್‌ ಗಳಿಂದ ಜಯ ಗಳಿಸಿದೆ.

ಈ ಮೂಲಕ ಸರಣಿಯಲ್ಲಿ 2-1ರ ಮುನ್ನಡೆಯನ್ನು ಕಾಯ್ದುಕೊಂಡ ಭಾರತ, ಸರಣಿ ಗೆಲ್ಲುವ ತವಕದಲ್ಲಿದೆ.

bi1

ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಪತನ ಕಂಡಿತ್ತು.

ಆದರೆ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದರೂ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 290 ರನ್‌ ಗಳಿಗೆ ಆಲೌಟಾಗಿತ್ತು.

ನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ ಇಂಗ್ಲೆಂಡ್‌ ತಂಡಕ್ಕೆ ದಿಟ್ಟ ಉತ್ತರವನ್ನೇ ನೀಡಿತ್ತು.

b i

ಟೀಂ ಇಂಡಿಯಾದ ಆರಂಭಿಕ ರೋಹಿತ್‌ ಶರ್ಮಾ ಹಾಗೂ ಕೆ.ಎಲ್.ರಾಹುಲ್‌ ಭರ್ಜರಿ ಜೊತೆಯಾಟ ನೀಡಿದ್ದರು. ರಾಹುಲ್‌ 46 ರನ್‌ ಗಳಿಸಿ ಔಟಾಗುತ್ತಲೇ ರೋಹಿತ್‌ ಶರ್ಮಾ ಜೊತೆಯಾದ ಚೇತೇಶ್ವರ ಪೂಜಾರ ಭರ್ಜರಿ ಅರ್ಧಶತಕ ಸಿಡಿದರು.

ರೋಹಿತ್‌ ಶರ್ಮಾ 127 ರನ್‌ ಸಿಡಿಸುವ ಮೂಲಕ ಭರ್ಜರಿ ಶತಕ ಬಾರಿಸಿದ್ದಾರೆ. ವಿರಾಟ್‌ ಕೊಯ್ಲಿ 44, ರಿಷಬ್‌ ಪಂತ್‌ 50, ಶಾರ್ದೂಲ್‌ ಠಾಕೂರ್‌ 60 ರನ್‌ ಸಿಡಿಸುವ ಮೂಲಕ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 466 ರನ್‌ಗಳಿಗೆ ಪತನ ಕಂಡಿದೆ.

Copyright © All rights reserved Newsnap | Newsever by AF themes.
error: Content is protected !!