ಗ್ರಾಪಂ ಚುನಾವಣೆಯ ದ್ವೇಷ ರಾಜಕಾರಣ 1500 ಕೋಳಿಗೆ ವಿಷ

Team Newsnap
1 Min Read

ಗ್ರಾಪಂ ಚುನಾವಣೆ ಕಾವು ಏರುತ್ತದೆ. ಹಳ್ಳಿಗಳಲ್ಲಿ ದ್ವೇಷ ರಾಜಕಾರಣ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಪ್ರಕರಣ ಕಿಕ್ಕೇರಿಯಿಂದ ವರದಿಯಾಗಿದೆ.

ಗ್ರಾಮ ಪಂಚಾಯತಿ ಪಾಲಿಟಿಕ್ಸ್ ಗೆ 1500 ಕೋಳಿ ಮರಿಗಳು ಬಲಿಯಾಗಿವೆ.
ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಸೊಳ್ಳೇಪುರ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಸೊಳ್ಳೇಪುರ ಗ್ರಾಮದ ಜಯರಾಮು ರವರಿಗೆ ಸೇರಿದ ಕೋಳಿ ಫಾರಂನಲ್ಲಿ ಸಾಕಲಾಗಿದ್ದ 1500 ಕೋಳಿ ಮರಿಗಳಿಗೆ ಆಹಾರದಲ್ಲಿ ವಿಷ ಹಾಕಿ ದುಷ್ಕರ್ಮಿಗಳು ಕೊಂದಿದ್ದಾರೆ.

ಸತತವಾಗಿ ಕಳೆದ ಮೂರು ಬಾರಿಯಿಂದಲೂ ಚುನಾವಣೆ ಎದುರಿಸಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕಿಕ್ಕೇರಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ, ಮತ್ತು ಉಪಾದ್ಯಕ್ಷರಾಗಿದ್ದ ಜಯರಾಮು ಮತ್ತೆ ಈ ಬಾರಿಯೂ ಚುನಾವಣಾ ಕಣಕ್ಕೆ ಉಳಿಯಬಹುದು ಎಂಬ ಕಾರಣದಿಂದಾಗಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ಚುನಾವಣಾ ಸಮೀಪದಲ್ಲಿದ್ದಾಗಲೇ ನಡೆದಿರುವ ಈ ಕೃತ್ಯ ವನ್ನು ದ್ವೇಷಕ್ಕಾಗಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.

ಸ್ಥಳಕ್ಕೆ ಕಿಕ್ಕೇರಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.

Share This Article
Leave a comment