December 22, 2024

Newsnap Kannada

The World at your finger tips!

gp

ಗ್ರಾಪಂ ಚುನಾವಣೆ : ಅಭ್ಯರ್ಥಿಗಳನ್ನು ಹರಾಜು ಹಾಕಿದರೆ , ಇಬ್ಬರೂ ಗಡಿಪಾರು

Spread the love

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹರಾಜು ಆದರೆ ಸದಸ್ಯತ್ವ ಅನರ್ಹವಾಗುತ್ತದೆ. ಈಗ ಮತ್ತೊಂದು ಹೊಸ ರೂಲ್ಸ್ ಮಾಡಿದೆ ಚುನಾವಣಾ ಆಯೋಗ. ಸದಸ್ಯರನ್ನು ಹರಾಜು ಹಾಕಿದವರನ್ನೂ ಹಾಗೂ ಹರಾಜಿಗೆ ಒಳಗಾದ ಸದಸ್ಯರನ್ನೂ ಕೂಡ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಗಡಿಪಾರು ಮಾಡಲು ಆಯೋಗ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದೆ ಎಂದು ಹೇಳಲಾಗಿದೆ.

ಚುನಾವಣಾ ಆಯೋಗದ ಈ ಕಟ್ಟುನಿಟ್ಟಿನ ಎಚ್ಚರಿಕೆಯ ನಡುವೆಯೂ ರಾಜ್ಯದ ನಾನಾ ಕಡೆ ಗ್ರಾಪಂ ಅಭ್ಯರ್ಥಿಗಳನ್ನು ಬಹಿರಂಗವಾಗಿಯೇ ಹರಾಜು ಹಾಕುತ್ತಿರುವುದು ಪದೇ ಪದೇ ಕದ್ದು ಮುಚ್ಚಿ ಹರಾಜು ಹಾಕುವ ಪ್ರಕರಣಗಳು ನಡೆಯುತ್ತವೆ.

ಈ ಸಂಗತಿಯನ್ನು ಗಮನಿಸಿದ ಆಯೋಗವು ಹರಾಜು ಹಾಕುವವರು ಹಾಗೂ ಹರಾಜಿನ ಮೂಲಕ ಆಯ್ಕೆಯಾಗಿರುವವರನ್ನು ಗಡಿಪಾರು ಮಾಡಲು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ ಗೊತ್ತಾಗಿದೆ.

1 ಕೋಟಿ ರು. ಗಳ ತನಕ ಹರಾಜು!

ರಾಜ್ಯದ ನಾನಾ ಕಡೆ ಸುಮಾರು ೫ ಲಕ್ಷ ರು ಗಳಿಂದ ಒಂದು ಕೋಟಿ ರು. ವರೆಗೂ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳನ್ನು ಸಂತೆಯಲ್ಲಿ ಕುರಿ, ಕೋಳಿ, ಎತ್ತುಗಳಂತೆ ರಾಜಾರೋಷವಾಗಿ ಹರಾಜು ಹಾಕುತ್ತಿದ್ದಾರೆ.

ಅಭ್ಯರ್ಥಿಗಳು ಮತ್ತು ಗ್ರಾಮಸ್ಥರ ನಡುವಿನ ಒಡಂಬಡಿಕೆ, ಬೆದರಿಕೆ, ಅಭಿವೃದ್ಧಿಯ ನೆಪ ಇಟ್ಟುಕೊಂಡು ಸದಸ್ಯರನ್ನು ಗ್ರಾಮಸ್ಥರೇ ಹರಾಜು ಹಾಕುತ್ತಿದ್ದಾರೆ . ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಯಾರೂ ದೂರು ನೀಡುವುದಿಲ್ಲ ಎಂದು ಆಯೋಗ ಹೇಳಿದೆ.

25 ಘಟನೆಗಳು ಹರಾಜಿಗೆ ಸಾಕ್ಷಿ:

ಗ್ರಾಮಸ್ಥರು, ದೇವಸ್ಥಾನಗಳು, ಶಾಲೆಗಳು, ಕುಡಿಯುವ ನೀರಿನ ಅಭಿವೃದ್ಧಿಗೆ ಹಣವನ್ನು ಸಂಗ್ರಹ ಮಾಡುವ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಹರಾಜಿಗೆ ಸಾಕ್ಷಿಯಾದರೆ, ಅವರು ತಮ್ಮ ಪಂಚಾಯಿತಿ ಚುನಾವಣಾ ಅಧಿಕಾರಿ ಅಥವಾ ತಹಸಿಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಕನಿಷ್ಠ 25 ಘಟನೆಗಳು ವರದಿಯಾಗಿವೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್, ಮಂಡ್ಯ, ಬಳ್ಳಾರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಡೆದಿವೆ.‌

ಗಡಿಪಾರು, ಅನರ್ಹತೆ ಎರಡೂ ಶಿಕ್ಷೆ :

ಚುನಾವಣೆಗೆ ಮೊದಲೇ ಗ್ರಾಮ ಪಂಚಾಯಿತಿ ಚುನಾವಣೆ ಸ್ಥಾನಗಳು
ಹರಾಜಾಗಿವೆ. ಆದರೆ ಇಂತಹ ಅಭ್ಯರ್ಥಿಗಳನ್ನು ಪಂಚಾಯಿತಿ ವ್ಯಾಪ್ತಿಯಿಂದಲೇ ಗಡಿಪಾರು ಮಾಡಿ ಚುನಾವಣೆ ಮುಗಿದ ನಂತರ ಅನರ್ಹಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಹಣ ಕೊಟ್ಟು ಅವಿರೋಧವಾಗಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಆಯೋಗ ಪ್ರಸ್ತಾಪ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಕಾಯ್ದೆ ಹಾಗೂ ಜನ ಪ್ರಾತಿನಿಧ್ಯ ಕಾಯ್ದೆ ಮೂಲಕ ಕಾನೂನು ಉಲ್ಲಂಘನೆ ಮಾಡುವವ ರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.

Copyright © All rights reserved Newsnap | Newsever by AF themes.
error: Content is protected !!