ಬೆಂಗಳೂರು : ಮೈಕೋ ಲೇಔಟ್‌ನಲ್ಲಿರುವ ವೆಗಾಸಿಟಿ ಮಾಲ್‌ನಿಂದ ಬಿಕಾಂ ಪದವೀಧರನೊಬ್ಬ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸುಹಾಸ್ ಅಡಿಗ (21) ಮೃತ ಪದವೀಧರ ಎಂದು ಗುರುತಿಸಲಾಗಿದ್ದು , ಮಧ್ಯಾಹ್ನ 2.30ರ ಸುಮಾರಿಗೆ ವೆಗಾಸಿಟಿ ಮಾಲ್‌ಗೆ (Vega City Mall) ಪ್ರವೇಶಿಸಿ 4ನೇ ಮಹಡಿಗೆ ಹೋಗಿ ಜನರು ನೋಡುತ್ತಿದ್ದಂತೆಯೇ ಕೆಳಗೆ ಹಾರಿದ್ದಾರೆ.
ಸುಹಾಸ್ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಕಾಲೇಜಿನಲ್ಲಿ ವಿವಿಧ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದು ,ಮೃತ ಸುಹಾಸ್‌ಗೆ ಕೆಲಸ ಸಿಕ್ಕಿರಲಿಲ್ಲ.
ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ಪೋಷಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.3 ಮಕ್ಕಳು ಕೆರೆಯಲ್ಲಿ ಮುಳುಗಿ ದುರ್ಮರಣ
ಸುಹಾಸ್ ತಂದೆ ವಾಸುದೇವ ಅಡಿಗ ನೀಡಿರುವ ದೂರು ಆಧರಿಸಿ ಮೈಕೋ ಲೇಔಟ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು