ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ನಡೆಸುವ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಖಾತೆ ಮಾಡುವ ಆಂದೋಲನ ಹಮ್ಮಿಕೊಳ್ಳಲಾಗುವುದು.
ಈ ಆಂದೋಲನದ ಮೂಲಕ ಮೃತಪಟ್ಟವರ, ತಾತಾ ಮುತ್ತಾತನ ಹೆಸರಿನಲ್ಲಿರುವ ಜಮೀನಿನ ಪಹಣಿ ಪತ್ರವನ್ನು ಮಕ್ಕಳ ಹೆಸರಿಗೆ ವರ್ಗಾಯಿಸಲಾಗುತ್ತದೆ. ರೈತರ ಮಕ್ಕಳಿಗೆ ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ದೊರಕಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಮೀನಿನ ಪಹಣಿಪತ್ರವನ್ನು ಮಕ್ಕಳಿಗೆ ವಿಭಜಿಸಿ ಅವರ ಹೆಸರಿಗೆ ವರ್ಗಾಯಿಸಬೇಕೆಂದು ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್. ಅಶೋಕ ಅವರು ಸೂಚನೆ ನೀಡಿದ್ದಾರೆ.
ನೂರಾರು ವರ್ಷಗಳಿಂದ ಪಿತ್ತ್ರಾಜಿತ ಹೆಸರಿನಲ್ಲಿರುವ ತಮ್ಮ ಆಸ್ತಿಯನ್ನು ತಮ್ಮ ಹೆಸರಿಗೆ ಸುಲಭವಾಗಿ ವರ್ಗಾಯಿಸಲು ಸರ್ಕಾರದಿಂದ ರೈತರಿಗೆ ಅವಕಾಶ ನೀಡಲಾಗಿದೆ. ಈ ಮಾಹಿತಿಯನ್ನು ತಮ್ಮ ಆಸ್ತಿಯು ಪಿತ್ರಾರ್ಜಿತ ಅಥವಾ ಮೃತಪಟ್ಟವರ ಹೆಸರಿನಲ್ಲಿ ಇದ್ದು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದ ಎಲ್ಲ ರೈತರಿಗೆ ತಪ್ಪದೆ ತಿಳಿಸಿ ಹಾಗೂ ಈ ಯೋಜನೆಯ ಲಾಭವನ್ನು ಹೆಚ್ಚು ರೈತರು ಪಡೆದುಕೊಳ್ಳಬಹುದು.
More Stories
ಮನ್ಮುಲ್ ಫಲಿತಾಂಶ: ಕಾಂಗ್ರೆಸ್ ಅಧಿಕಾರಕ್ಕೆ ; 3 ತಾಲೂಕುಗಳ ಫಲಿತಾಂಶಕ್ಕೆ ತಡೆ
ಮಂಡ್ಯ: ಬಾಲಕಿಗೆ ಕೇಕ್ ನೀಡಿದ ಕಾಮುಕರು ಚಾಕು ಬೆದರಿಕೆ ಹಾಕಿ ಗ್ಯಾಂಗ್ ರೇಪ್
ಕೆರೆಗೆ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು