ರಾಜ್ಯದಲ್ಲಿ ಎಲ್ಲಾ ಜನರೂ ಕೊರೋನಾ ಹಾವಳಿಯಿಂದ ತತ್ತರಿಸಿದ್ದಾರೆ. ಆರು ತಿಂಗಳ ಕಾಲ ಎಲ್ಲ ಆರ್ಥಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದೆ. ರಾಜ್ಯ, ದೇಶ ಆರ್ಥಿಕ ನಷ್ಟದಲ್ಲಿ ತೇಲುತ್ತಿದೆ. ಅನೇಕರು ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾರೆ. ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಒದ್ದಾಡುತ್ತಿದ್ದಾರೆ. ಇಂಥಹ ಸಮಯದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿ ವಿಜಯ್ ಭಾಸ್ಕರ್ ಟಿ.ಎಮ್. ಕಾರು ಬಹಳ ಸದ್ದು ಮಾಡುತ್ತಿದೆ. ಇವರ ಹೊಸ ಕಾರಿನ ಬೆಲೆ ಬರೋಬ್ಬರಿ 76 ಲಕ್ಷ ರೂಪಾಯಿಗಳು.
ಈ ಬಗ್ಗೆ ಟ್ವಿಟರ್ ನಲ್ಲಿ ಜಗನ್ ಕುಮಾರ್ ಎಂಬುವರು ಟ್ವೀಟ್ ಮಾಡಿದ್ದಾರೆ. ಕಾರಿನ ಎಲ್ಲ ವಿವರಗಳಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಕಾರು ತಯಾರಿಕಾ ಕಂಪನಿ, ಅದರ ನೋಂದಣಿ ದಿನಾಂಕ, ಅದರ ರಸೀತಿಯ ಸಂಖ್ಯೆ ಎಲ್ಲವೂ ಫೋಟೋದಲ್ಲಿವೆ. ಈ ಟ್ವೀಟ್ ನ್ನು ಜಗನ್ ಮುಖ್ಯಮಂತ್ರಿ ಯಡಿಯೂರಪ್ಪ, ಬಿ.ಎಲ್. ಸಂತೋಷ್, ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ., ಹ್ಯಾಶ್ ಟ್ಯಾಗ್ ಬಳಸಿ ಅಚ್ಛೇದಿನ್ ಎಂದು ಬರೆದುಕೊಂಡಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು