December 31, 2024

Newsnap Kannada

The World at your finger tips!

meghana

ಹಿರಿ – ಕಿರು ತೆರೆಗೂ ಗುಡ್ ಬೈ ಹೇಳುತ್ತಾರೆಯೇ ಮೇಘಾ ಶೆಟ್ಟಿ ?

Spread the love

ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರವಾಹಿಗೆ ಅರ್ಧದಲ್ಲೇ ಗುಡ್ ಬೈ ಹೇಳುತ್ತಾರೆ ಎಂಬ ವದಂತಿ ದೃಡವಾಗುತ್ತಿರುವ ಅನುಮಾನ ಹೆಚ್ಚಾಗಿದೆ.

ಧಾರವಾಹಿಗಳಿಗೆ ಬಣ್ಣ ಹಚ್ಚುವ ಗೀಳು ಈಗ ಆಸಕ್ತಿ ಕಡಿಮೆ ಆಗಿದೆ ಅಂತೆ. ಜೊತೆ ಜೊತೆಯಲಿ ಧಾರವಾಹಿ ಮೇಘಾ ಶೆಟ್ಟಿ ನಟಿಸುವ ಕೊನೆಯ ಧಾರವಾಹಿ ಆಗಲು ಬಹುದು.

ಮೇಘಾ ಗೆ ಈಗ ಅವಕಾಶಗಳು ಬಂದಿವೆ . ಗೋಲ್ಡನ್ ಸ್ಟಾರ್ ಗಣೇಶ್ ನೊಂದಿಗೆ ಹೊಸ ಚಿತ್ರದಲ್ಲಿ ನಾಯಕಿ ಆಗಿ ನಟಿಸಲಿದ್ದಾರೆ.

anusirimane

ಅಲ್ಲದೇ ಚಂದನ್ ಶೆಟ್ಟಿ ಸಾಹಿತ್ಯ, ನಿರ್ದೇಶನ, ಹೊಸ ರ್ಯಾಪ್ ಸಾಂಗ್ ಗೆ ಮೇಘಾ ಹೆಜ್ಜೆ ಹಾಕಲಿದ್ದಾರೆ.
ಈ ನಡುವೆ ಎಂಬಿಎ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿರುವ ಮೇಘಾ ಅದನ್ನು ಕೂಡ ಮುಂದುವರೆಸುವ ಬಗ್ಗೆ ಆಲೋಚನೆ ಮಾಡಿದ್ದಾರೆ.

ಐಎಎಸ್ ಮಾಡುವ ಅಪ್ಪ – ಅಮ್ಮ ಆಸೆ ಹಾಗೂ ಮೇಘಾಳ ಬಹು ದಿನಗಳ ಕನಸು ನನಸು ಮಾಡಲು ನಿರ್ಧರಿಸಿ ಕಳೆದ 10 ವರ್ಷಗಳಿಂದಲೂ ಪ್ರಯತ್ನ ನಡೆಸುತ್ತಿದ್ದಾಳೆ. ಈಗ ಆ ಕಡೆ ಹೆಚ್ಚು ಗಮನ ನೀಡಲು ಮುಂದಾಗಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಮೇಘಾ ಕಿರು ಮತ್ತು ಹಿರಿ ತೆರೆಗೆ ಗುಡ್ ಬೈ ಹೇಳುವ ದಿನಗಳು ದೂರ ಉಳಿದಿಲ್ಲ.

Copyright © All rights reserved Newsnap | Newsever by AF themes.
error: Content is protected !!