December 23, 2024

Newsnap Kannada

The World at your finger tips!

ima 1

ಐಎಂಎದಲ್ಲಿ ಹಣ ಕಳೆದುಕೊಂಡವರಿಗೆ ಗುಡ್ ನ್ಯೂಸ್!

Spread the love

ಐಎಂಎ ಪ್ರಕರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಹಣ ಹಿಂದಿರುಗಿಸುವ ಪ್ರಕ್ರಿಯೆಗೆ ಸರ್ಕಾರ ಕೈ ಹಾಕುವ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರಿಗೆ ಗುಡ್ ನ್ಯೂಸ್ ನೀಡಿದೆ.

ಠೇವಣಿದಾರರು ತಮ್ಮ ಠೇವಣಿ ಬಗ್ಗೆ ಮಾಹಿತಿ ನೀಡಲು ಮತ್ತು ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ಮಾಡಲಿದೆ. ನವೆಂಬರ್ 25 ರಿಂದ ಡಿಸೆಂಬರ್ ತಿಂಗಳು 24ರವರೆಗೆ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಲು ಠೇವಣಿದಾರರಿಗೆ ಅವಕಾಶ ನೀಡಲಾಗಿದೆ ಎಂದು ಐಎಂಎ ಪ್ರಕರಣದ ವಿಶೇಷಾಧಿಕಾರಿಯಾದ ಹರ್ಷಾ ಗುಪ್ತಾ ಕ್ಲೈಮ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಅರ್ಜಿಸಲ್ಲಿ ಸಲ್ಲಿಸುವುದು ಎಲ್ಲಿ?

ಆನ್ ಲೈನ್, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜೀ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಎರಡು ಹಂತದಲ್ಲಿ ಸಲ್ಲಿಕೆ ಮಾಡಬೇಕಾಗಿದೆ. ಮೊದಲ ಹಂತ ಹೆಸರು, ವಿಳಾಸ, ಆಧಾರ್ ಸೇರಿದಂತೆ ಇನ್ನಿತರ ಮಾಹಿತಿ ಹಾಗೂ ಎರಡನೇ ಹಂತ ಐಎಂಎ ಠೇವಣಿ ಬಗ್ಗೆ ಮಾಹಿತಿ ನೀಡುವುದಾಗಿದೆ. ಆಧಾರ್ ಇಲ್ಲದೆ ಇರೋರು ತನ್ನ ಬ್ಯಾಂಕ್ ಖಾತೆಯಿಂದ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಖಾತೆಗೆ 1 ರೂಪಾಯಿ ವರ್ಗಾಯಿಸಿ ಯುಟಿಆರ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಬೇಕಾಗಿರುವ ದಾಖಲೆಗಳು:

ಠೇವಣಿದಾರರು ಸಲ್ಲಿಸಿದ ಹೂಡಿಕೆ ವಿವರ ಐಎಂಎ ನಲ್ಲಿ ಇದ್ದರೆ ಹೊಸ ದಾಖಲೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ದಾಖಲಾತಿ ಇಲ್ಲದೆ ಹೋದ್ರೆ ಹೂಡಿಕೆ ರಶೀದಿಯನ್ನ ಆಯಾ ಭಾಗದ ತಹಶೀಲ್ದಾರರ ಮೂಲಕ ಇ-ಧೃಡೀಕರಣ ಮಾಡಿಸಿ ದಾಖಲೆ ಸಲ್ಲಿಸಬೇಕು. ದಾಖಲೆ ಸಲ್ಲಿಕೆಗೆ 60 ದಿನ ಅವಕಾಶ ನೀಡಲಾಗುತ್ತದೆ. ಠೇವಣಿದಾರರು ನಿಧನರಾಗಿದ್ರೆ ನಾಮಿನಿ ಯಾರ್ ಇರ್ತಾರೆ ಅವರು ಅರ್ಜಿ ಸಲ್ಲಿಕೆ ಮಾಡಬಹುದು. ಠೇವಣಿದಾರರು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರೆ ನಾಮಿನಿ ಅರ್ಜಿ ಹಾಕಬಹುದು. ಆದ್ರೆ ಆಸ್ಪತ್ರೆಯ ದಾಖಲಾತಿ, ಮರಣದ ದಾಖಲಾತಿ ಪತ್ರ ಅರ್ಜಿ ಜೊತೆ ಸಲ್ಲಿಸಬೇಕಾಗುತ್ತೆ ಎಂದು ಹರ್ಷ ಗುಪ್ತಾ ಹೇಳಿದ್ದಾರೆ.

ಐಎಎಂನಲ್ಲಿ ಸುಮಾರು 1 ಲಕ್ಷ ಠೇವಣಿದಾರರು ಇದ್ದು, 2,900 ಕೋಟಿ ಹಣ ಠೇವಣಿದಾರರು ಹೂಡಿಕೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 1,500 ಕೋಟಿ ಹೂಡಿಕೆದಾರರಿಗೆ ರಿಟರ್ನ್ ರೂಪದಲ್ಲಿ ಮೊತ್ತ ಸ್ವೀಕರಿಸುತ್ತಾರೆ. ಐಎಂಎ ಕೇಸ್ ನಲ್ಲಿ ಸುಮಾರು 475 ಕೋಟಿ ಸ್ಥಿರ ಹಾಗೂ ಚರಾಸ್ತಿಗಳನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಕಾನೂನಿನ ಕ್ರಮಗಳು:

ಈ ಪ್ರಕರಣಕ್ಕಾಗಿ ವಿಶೇಷ ಕೋರ್ಟ್ ರಚನೆ ಮಾಡಲಾಗಿದೆ. ಫಾಸ್ಟ್ ಟ್ರ್ಯಾಕ್ ಮಾಡಲು ಕೋರ್ಟ್ ರಚನೆ ಆಗಿದ್ದು, 3 ತಿಂಗಳಲ್ಲಿ ತೀರ್ಪು ಬರುವ ನಿರೀಕ್ಷೆ ನಮಗೆ ಇದೆ. ಕೋರ್ಟ್ ತೀರ್ಪು ಬಂದ ಬಳಿಕ ಮುಟ್ಟುಗೋಲು ಹಾಕಿದ ಪ್ರಾಪರ್ಟಿ ಬಿಡ್ ಮಾಡಬೇಕು. ಯಾರಾದ್ರು ದುಡ್ಡು ಕೊಡಿಸ್ತೀನಿ ಅಂತ ಹಣ ಮಾಡಲು ಮುಂದಾದ್ರೆ ಅವ್ರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಿಸ್ತೀವಿ. ವಿಶೇಷ ಪ್ರಾಧಿಕಾರ ರಚನೆ ಆಗಿದೆ. ಇದರ ಅಡಿಯಲ್ಲಿ ಸಂಪೂರ್ಣ ಪ್ರಕ್ರಿಯೆ ನಡೆಯುತ್ತೆ. ಮಧ್ಯವರ್ತಿಗಳಿದ್ದರೆ ದೂರು ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ. ಇದೆಲ್ಲ ಪ್ರಕ್ರಿಯೆ ಮಾಡೋಕೆ 5-6 ತಿಂಗಳು ಆಗಬಹುದು ಠೇವಣಿದಾರರು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗಬಾರದು ಎಂದು ಹರ್ಷ ಗುಪ್ತಾ ಮನವಿ ಮಾಡಿದ್ದಾರೆ.

ಅರ್ಜಿ ಸಲ್ಲಿಕೆ ಗೊಂದಲಗಳಿದ್ದರೆ ಸಂಪರ್ಕ ಸಂಖ್ಯೆ:

ದೂರವಾಣಿ – 080-46885959(ಬೆಳಗ್ಗೆ 8 ರಿಂದ ರಾತ್ರಿ 8),ವಾಟ್ಸ್ ಆಪ್- 7975568880, ಮೇಲ್ ಐಡಿ- imaclaims.Karnataka.gov.in.Splocaima20gmail.comಈ ಸಂಖ್ಯೆ, ಮೇಲ್ ಐಡಿ, ವಾಟ್ಸಪ್ ನಿಂದ ಮಾಹಿತಿ ಪಡೆಯಬಹುದದಾಗಿದೆ.

Copyright © All rights reserved Newsnap | Newsever by AF themes.
error: Content is protected !!