December 29, 2024

Newsnap Kannada

The World at your finger tips!

WhatsApp Image 2022 11 18 at 6.39.17 PM

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಉಚಿತವಾಗಿ ಅಕ್ಕಿಯ ಜೊತೆಗೆ ಸಿಗಲಿವೆ 9 ಹೊಸ ವಸ್ತುಗಳು!

Spread the love

ಬೆಂಗಳೂರು: ಉಚಿತ ಪಡಿತರ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ 9 ಹೊಸ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ಬದಲಾವಣೆ ಫಲಾನುಭವಿಗಳಿಗೆ ಪೌಷ್ಟಿಕತೆ ಮತ್ತು ಆರೋಗ್ಯ ಸುಧಾರಣೆಯ ಅನುಕೂಲವನ್ನು ನೀಡಲಿದೆ.

ಇದುವರೆಗೆ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ಗೋಧಿ ಮಾತ್ರ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಸರ್ಕಾರವು ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸಮತೋಲಿತ ಪೌಷ್ಟಿಕ ಆಹಾರ ಒದಗಿಸಲು ಈ 9 ಹೊಸ ವಸ್ತುಗಳನ್ನು ಉಚಿತವಾಗಿ ನೀಡಲಿದೆ.

ಈಗ ಪಡಿತರ ಚೀಟಿದಾರರಿಗೆ ದೊರೆಯುವ ವಸ್ತುಗಳು:

  1. ಗೋಧಿ
  2. ಕಾಳುಗಳು
  3. ಬೇಳೆ
  4. ಸಕ್ಕರೆ
  5. ಉಪ್ಪು
  6. ಸಾಸಿವೆ ಎಣ್ಣೆ
  7. ಹಿಟ್ಟು
  8. ಸೋಯಾಬೀನ್
  9. ಮಸಾಲೆಗಳು

ಸರ್ಕಾರದ ಉದ್ದೇಶ

ಈ ಬದಲಾವಣೆ ಮೂಲಕ ಬಡ ಕುಟುಂಬಗಳಿಗೆ ಸಮತೋಲಿತ ಪೌಷ್ಟಿಕ ಆಹಾರವನ್ನು ಒದಗಿಸಿ, ಅವರ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಉದ್ದೇಶ ಸರ್ಕಾರದಾಗಿದೆ.

ಯೋಜನೆಯ ಕಾರ್ಯಗತಗೊಳಿಸುವಿಕೆ

ಸರ್ಕಾರವು ಈ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿದೆ ಮತ್ತು ಮುಂದಿನ ಒಂದೆರಡು ತಿಂಗಳಲ್ಲಿ ದೇಶದಾದ್ಯಂತ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.ಇದನ್ನು ಓದಿ -ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ: ಡೀಲರ್‌ಗಳಿಗೆ ಕಮಿಷನ್ ಹೆಚ್ಚಳ

ಈ ಮಹತ್ವದ ಬದಲಾವಣೆಯಿಂದ ಕೋಟ್ಯಾಂತರ ಬಡವರು ಮತ್ತು ನಿರ್ಗತಿಕರಿಗೆ ನೇರ ಪ್ರಯೋಜನ ದೊರೆಯಲಿದ್ದು, ಆರೋಗ್ಯಕರ ಜೀವನ ನಡೆಸಲು ಅನುಕೂಲವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!