December 21, 2024

Newsnap Kannada

The World at your finger tips!

ganesh1

ಮತ್ತೆ ಕಿರುತೆರೆಗೆ ಬರ‍್ತಿದ್ದಾರೆ ಗೋಲ್ಡನ್ ಸ್ಟಾರ್

Spread the love

ಕಿರುತೆರೆಯಲ್ಲಿ ಅಸಂಖ್ಯಾತ ವೀಕ್ಷಕರ ಮನಗೆದ್ದು ಹಿರಿತೆರೆ (ಬಿಗ್‌ಸ್ಕ್ರೀ ನ್)ಯಲ್ಲಿ ರಾರಾಜಿಸಿ “ಗೋಲ್ಡನ್‌ಸ್ಟಾರ್” ಎಂಬ ಬಿರುದನ್ನು ಅಭಿಮಾನಿಗಳಿಂದ ಪಡೆದ ಗಣೇಶ್ ಕೆಲ ವರ್ಷಗಳ ನಂತರ ಈಗ ಮತ್ತೆ ಕಿರುತೆರೆಯಲ್ಲಿ ಕಾರ್ಯಕ್ರಮ(ರಿಯಾಲಿಟಿ ಶೋ)ವೊಂದನ್ನು ನಡೆಸಿಕೊಡಲು
ಬರ‍್ತಿದ್ದಾರೆ.

ಆಗ ಉದಯ ಟಿವಿಯಲ್ಲಿ “ಕಾಮಿಡಿ ಟೈಮ್ಸ್’ ಶೋ ನಡೆಸಿ ಯಶಸ್ವಿಯಾದ ಗಣೇಶ್ ಈಗ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ನಡೆಸಿಕೊಡಲು ಶೀಘ್ರದಲ್ಲೇ ಬರ‍್ತಿದ್ದೀನಿ ಎಂದು ಪ್ರೋಮೊವನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಬಹಿರಂಗಪಡಿಸಿದ್ದಾರೆ. ಆದರೆ ಶೋ ಏನು ಎಂಬುದನ್ನು ಮಾತ್ರ ಹೇಳಿಲ್ಲ.

ಸಾಕಷ್ಟು ಹಿಟ್ ಚಿತ್ರಗಳನ್ನು ಗಣೇಶ್ ನೀಡಿದ್ದಾರೆ. ಆದರೆ ಇತ್ತೀಚಿನ ಕೆಲ ಚಿತ್ರಗಳು (ಕೊರೊನೊ ಬರುವುದಕ್ಕೂ ಮೊದಲು) ನಿರೀಕ್ಷಿತ ಯಶಸ್ಸು ಪಡೆದಿರಲಿಲ್ಲ ಎಂಬ ಬೇಸರ ಅವರ ಅಭಿಮಾನಿಗಳಲ್ಲಿದೆ. ಈಗಲೂ ಹೊಸ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

“ಬಹಳ ದಿನಗಳ ನಂತರ ಕಿರುತೆರೆಗೆ, ಜೀ ಕನ್ನಡದ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದ್ದೀನಿ. ಶೀಘ್ರದಲ್ಲಿ….ನಿರೀಕ್ಷಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ “ಗಣಪನ ಆಗಮನ’ ಎಂದು ಜೀ ವಾಹಿನಿ ಗಮನಾರ್ಹ ಪ್ರೋಮೊ ಬಿಡುಗಡೆ ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!