April 15, 2025

Newsnap Kannada

The World at your finger tips!

temple,mysuru,hills

ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

Spread the love

ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟದ ಐತಿಹಾಸಿಕ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ದೇವಾಲಯದ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸಿ, ಚಿನ್ನದ ರಥ ನಿರ್ಮಾಣದ ಪ್ರಸ್ತಾವನೆ ಮಾಡಿದ್ದರು. 12ನೇ ಶತಮಾನದ ಚಾಮುಂಡೇಶ್ವರಿ ದೇವಾಲಯದ ಮುಖ್ಯ ರಥವು ತಮಿಳುನಾಡಿನ ಭಕ್ತರಿಂದ ಕೊಡುಗೆಯಾಗಿ ನಿರ್ಮಾಣಗೊಂಡ ಮರದ ರಥವಾಗಿದೆ. ಇದು ಕಾಲಾವಧಿಯಿಂದ ಹದಗೆಟ್ಟಿರುವುದರಿಂದ, ಅದನ್ನು ಬದಲಿಸಿ ಚಿನ್ನದ ರಥ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ನೀಡಬೇಕೆಂದು ಮನವಿ ಮಾಡಲಾಗಿದೆ.

ಪ್ರಸ್ತಾವಿತ ಯೋಜನೆಯ ವಿವರಗಳು:

  • ಹೊಸ ಚಿನ್ನದ ರಥದ ನಿರ್ಮಾಣಕ್ಕೆ ಅಂದಾಜು 100 ಕೋಟಿ ರೂಪಾಯಿಗಳ ವೆಚ್ಚವಾಗಲಿದೆ.
  • ಈ ಯೋಜನೆಗೆ ಭಕ್ತರು ತಮ್ಮ ಸ್ವಯಂಪ್ರೇರಿತ ದೇಣಿಗೆಗಳನ್ನು ನೀಡಲು ಸಿದ್ಧರಿದ್ದಾರೆ.
  • ಸರ್ಕಾರದ ಧನಸಹಾಯದ ಅವಶ್ಯಕತೆಯಿಲ್ಲದೆ ಈ ಯೋಜನೆಯನ್ನು ಮುನ್ನಡೆಸಲು ಉದ್ದೇಶಿಸಲಾಗಿದೆ.
  • 2025ರ ದಸರಾ ಮಹೋತ್ಸವದ ವೇಳೆಗೆ ಚಿನ್ನದ ರಥದ ಯೋಜನೆ ಪೂರ್ಣಗೊಳ್ಳುವ ಗುರಿಯನ್ನು ನಿಗದಿಪಡಿಸಲಾಗಿದೆ.

ಇದನ್ನು ಓದಿ – ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಜೀವಂತ

ಈ ಚಿನ್ನದ ರಥದ ನಿರ್ವಾಣವು ಚಾಮುಂಡೇಶ್ವರಿ ದೇವಿಯ ವೈಭವವನ್ನು ಹೆಚ್ಚಿಸುವಲ್ಲಿ ಹಾಗೂ ಭಕ್ತರ ಬಾಹುಮಾನಗಳನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

Copyright © All rights reserved Newsnap | Newsever by AF themes.
error: Content is protected !!