ಧಾರವಾಡ: ಧಾರವಾಡದ ಪೊಲೀಸರು ಮುಂಬೈನಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಮೂಲಕ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ, ನರೇಂದ್ರ ಕ್ರಾಸ್ ಬಳಿ ಬಸ್ ತಡೆದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸಾಗಿಸುತ್ತಿದ್ದ ಭವರ್‌ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತನಿಂದ ಒಟ್ಟು 1237.20 ಗ್ರಾಂ ತೂಕದ ಚಿನ್ನದ ಆಭರಣಗಳು, ಚಿನ್ನದ ಬಿಸ್ಕೆಟ್ ಮತ್ತು 15 ಕೆಜಿ ಬೆಳ್ಳಿಯ ಆಭರಣಗಳು ಜಪ್ತಿ ಮಾಡಲಾಗಿದೆ.
ಮೂಲತಃ ರಾಜಸ್ಥಾನದವನಾದ ಭವರ್‌ಸಿಂಗ್, ಹುಬ್ಬಳ್ಳಿಯ ದುರ್ಗದಬೈಲ್ ಪ್ರದೇಶದಲ್ಲಿ ವಾಸವಿದ್ದು,ಆತನು ಯಾವುದೇ ದಾಖಲೆಗಳಿಲ್ಲದೆ ಚಿನ್ನ ಮತ್ತು ಬೆಳ್ಳಿಯನ್ನು ಒಂದು ಬ್ಯಾಗ್ ಹಾಗೂ ಒಂದು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದನು.
ಧಾರವಾಡ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಅವರೇ ಈ ಪ್ರಕರಣದ ವಿವರಗಳನ್ನು ನೀಡಿದ್ದು, ಈ ಸಾಗಾಟಕ್ಕೆ ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಭವರ್‌ಸಿಂಗ್ ವಶದಲ್ಲಿದ್ದು, ಈತನ ಜೊತೆಗೂಡಿ ಕೆಲಸ ಮಾಡುತ್ತಿದ್ದ ನರಪಲ್‌ಸಿಂಗ್ ಎಂಬಾತನಿಗಾಗಿ ಹುಡುಕಾಟ ಮುಂದುವರಿದಿದೆ.ಕರ್ನಾಟಕ ಸರ್ಕಾರದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಸದ್ಯ, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
More Stories
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ