ಕೊರೋನಾ ವೈರಸ್ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಆದರೆ, ಕಳೆದ ವಾರ ಚಿನ್ನದ ದರ ಇಳಿಕೆ ಕಂಡಿದೆ.
ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿದೆ. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ ವಾರ ಒಟ್ಟು 940 ರೂಪಾಯಿ ಇಳಿಕೆ ಕಂಡಂತಾಗಿದೆ. ಈ ಮೂಲಕ 10 ಗ್ರಾಂ ಆಭರಣ ಚಿನ್ನದ ಬೆಲೆ 47,000 ರೂಪಾಯಿ ಆಗಿದೆ.
ಇನ್ನು, ಕೆಲ ದಿನಗಳ ಕಾಲ ಬೆಳ್ಳಿ ದರ ಇಳಿಕೆ ಕಂಡಿತ್ತು. ನಂತರ ಮತ್ತೆ ಬೆಳ್ಳಿ ದರದಲ್ಲಿ ಏರಿಕೆ ಕಂಡಿತ್ತು. ಈ ಮೂಲಕ ಕೆಜಿ ಬೆಳ್ಳಿಗೆ 70 ಸಾವಿರದ ಗಡಿ ದಾಟಿತ್ತು. ನಂತರ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಕಳೆದ ವಾರ ಬೆಳ್ಳಿ ದರ 4 ದಿನ ಇಳಿಕೆ ಹಾಗೂ 2 ದಿನ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 350 ರೂಪಾಯಿ ಏರಿಕೆ ಕಂಡಂತಾಗಿದೆ. ಈ ಮೂಲಕ ಕೆಜಿ ಬೆಳ್ಳಿ ಬೆಲೆ 62,500 ರೂಪಾಯಿ ಆಗಿದೆ.
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ