ಗಂಡ ಬೇಗ ವಾಪಸ್ ಬರಲೆಂದು ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.
ಕೌಟುಂಬಿಕ ಕಲಹದಿಂದ ಬೇಸತ್ತ ಮನೆ ಬಿಟ್ಟು ಹೋಗಿರುವ ಇಬ್ಬರ ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಈ ಪತ್ರಗಳು ನಾರಾಯಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ.
ಪತ್ರದಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮನೆಗೆ ವಾಪಸ್ ಬರಬೇಕು. ನಾವು ಹೇಳಿದಂತೆ ನಮ್ಮ ಗಂಡ ಕೇಳಬೇಕು ಎಂಬ ಒಕ್ಕಣೆಯುಳ್ಳ ಎರಡು ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.
ಪತ್ರದಲ್ಲಿ, ನನ್ನ ಗಂಡ ಜಗಳವಾಡಿಕೊಂಡು ನನ್ನನ್ನು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕು. ಇಲ್ಲದಿದ್ದರೆ ಅದಕ್ಕೆ ನೀನೆ ಹೊಣೆ ಎಂದು ಸಹ ಪತ್ರಗಳಲ್ಲಿ ಬರೆಯಲಾಗಿದೆ.
ಆದರೆ ಈ ಪತ್ರದಲ್ಲಿ ಮಹಿಳೆಯರ ಹೆಸರು, ವಿಳಾಸ ಯಾವುದು ಇಲ್ಲ. ದೇವಸ್ಥಾನದ ಹುಂಡಿಯಲ್ಲಿ ಹಣ ಎಣಿಕೆ ಮಾಡುವ ಮುನ್ನ ಈ ಪತ್ರಗಳು ಸಿಕ್ಕಿವೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು