Mysore Dasara - 2023

ಕವಿತೆಯ ಬೆನ್ನು ಹತ್ತಿ ಹೋಗಿ, ಕವಿಗೋಷ್ಠಿಯನ್ನಲ್ಲ – ಕವಿ ಸತೀಶ್ ಕುಲಕರ್ಣಿ

ಮೈಸೂರು:

ನಾನು ಮಣ್ಣಿನ ಮಗನಲ್ಲ ನಾನು ಹೆಣ್ಣಿನ ಮಗ. ಬಹಳಷ್ಟು ಕವಿಯತ್ರಿಯರ ಮಧ್ಯೆ ನಾನು ವೇದಿಕೆಯಲ್ಲಿರುವುದು ಬಹಳ ವಿಶೇಷವೆನಿಸುತ್ತಿದೆ. ನಾವು ಕವಿತೆಯ ಬೆನ್ನತ್ತಿ ಹೋಗಬೇಕು,ವಿನಹ ಕವಿಗೋಷ್ಠಿ ಬೆನ್ನತ್ತಿ ಅಲ್ಲ ಎಂದು ಕವಿ ಸತೀಶ್ ಕುಲಕರ್ಣಿ ಅಭಿಪ್ರಾಯಪಟ್ಟರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಕವಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಲ್ಕರ್ಣಿ ಅವರು ನಾಡಿನಾದ್ಯಂತ ಆನೇಕ ಜಿಲ್ಲೆಗಳಿಂದ ಬಂದಿರುವಂತಹ ಮಹಿಳಾ ಕವಿಯತ್ರಿಯರು ತಮ್ಮ ಕವಿತೆಗಳ ರಸದೌತಣವನ್ನು ಉಣಬಡಿಸಿದರು.

ಮೊದಲ ಬಾರಿಗೆ ಕವಿಗೋಷ್ಠಿ ಅಧ್ಯಕ್ಷತೆವಹಿಸಿಕೊಂಡ ನನಗೆ ಬಹಳ ಸಂತೋಷ ಕೊಟ್ಟಿದೆ. ವೇದಿಕೆಗೂ ನನಗೂ ಯಾವ ರೀತಿಯಾದ ನಂಟು ಇದೆ ಎಂಬುದನ್ನು ನಾನು ಸ್ಮರಿಸುತ್ತಿದ್ದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕವಯಿತ್ರಿ ಸವಿತಾ ನಾಗಭೂಷಣ್ ರವರು ಮಾತನಾಡಿ ನಾನು ಕಲಾವಿದೆ ಆದರೆ ಇಲ್ಲಿ ಬಹಳಷ್ಟು ಕವಿಯತ್ರಿಯರು ಕವನ ಆಸ್ವಾದಿಸುವವರಿದ್ದಾರೆ. ಮೈಸೂರು ದಸರಾದಲ್ಲಿ ಕವಿಗೋಷ್ಠಿಗಳನ್ನು ನಡೆಸಿ, ತಾಯಿ ಕನ್ನಡಾಂಬೆಗೆ ಈ ತರಹದ ಒಂದು ಸೇವೆಯು ಪ್ರತಿ ವರ್ಷ ಸಾಗುತ್ತಿರಲಿ ಎಂದರು.

ಮಮತಾ ಕೋಲಾರ, ದೀಪ್ತಿ ಭದ್ರವತಿ, ಶ್ವೇತ ಮಂಡ್ಯ, ವಿಭಾ ಪುರೋಹಿತ ಬೆಂಗಳೂರು, ವಿಜಯಲಕ್ಷ್ಮಿ ಮೈಸೂರು ಇನ್ನೂ ಆನೇಕ ಕವಿಯತ್ರಿಯರು ದಸರಾ ಉತ್ಸವ ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳ ಸಾರವನ್ನು ವಿವರಿಸುವುದರ ಮೂಲಕ ’ಹೆಣ್ಣು ಅಬಲೆಯಲ್ಲ ಸಬಲೆ’ ಆಕೆಯ ಶಕ್ತಿ, ಸಾಮರ್ಥ್ಯ, ಸಾಧನೆಯ ಕುರಿತ ಕವನಗಳು ಸಾಹಿತ್ಯ ಪ್ರೇಮಿಗಳ ಗಮನ ಸೆಳೆಯಿತು.

ಹಲವಾರು ಜಿಲ್ಲೆಗಳಿಂದ ಬಂದಂತಹ ಮಹಿಳಾ ಕವಯಿತ್ರಿಯರನ್ನೂ ವೇದಿಕೆ ಮೇಲೆ ಕರೆದು ಕವಿತೆ ವಾಚನಗಳನ್ನು ಮಾಡಿಸಿ ಕವಿತೆ ವಾಚನೆ ಮಾಡಿದ ಎಲ್ಲಾ ಕವಯಿತ್ರಿಯರಿಗೂ ವೇದಿಕೆ ಮೇಲೆ ಅಥಿತಿಗಳಿಂದ ಗೌರವ ಸಮರ್ಪಣೆ ಯನ್ನು ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳ್ಳಿತೆರೆ ಕಿರುತೆರೆ ಹಿರಿಯ ಕಲಾವಿದೆಯಾದ ಚಿತ್ಕಳಾ ಬಿರಾದಾರ್ ಅವರು ನಮ್ಮೊಳಗೆ ಒಬ್ಬ ಕವಿ ಇದ್ದಾನೆ ಎನ್ನುವುದನ್ನೆ ಇತ್ತೀಚಿನವರು ಮರೆತಿದ್ದಾರೆ.ಮಹಿಳೆಯರು ಹೆಚ್ಚಾಗಿ ಬರೆಯುವ ಕವಿತೆ ಗಳೆಲ್ಲವು ಮಹಿಳೆಯರ ಅಳಲು ಬಗ್ಗೆಯೇ ಹೆಚ್ಚಾಗಿ ಬರೆಯುತ್ತಾರೆ, ಆದಷ್ಟು ಅದನ್ನೇಲ್ಲ ನಿಲ್ಲಿಸಿ ಸಾಧನೆ ಮಾಡುತ್ತಿರುವವರ ಮಹಿಳೆಯರ ಬಗ್ಗೆ, ಸಂತೋಷದ ವಿಷಯಗಳ ಬಗ್ಗೆ ಹೆಚ್ಚಾಗಿ ಕವಿತೆಗಳನ್ನು ಬರೆದರೆ ಬೇರೆಯವರಿಗೂ ಇದು ಸ್ಪೂರ್ತಿ ಆಗುತ್ತದೆ ಎಂದು ಹೇಳಿದರು.

ಇತ್ತೀಚಿನ ಮಕ್ಕಳಿಗೆ ಕನ್ನಡದ ಪದ್ಯಗಳೇ ಬರುತ್ತಿಲ್ಲ. ಯಾವ ಮಕ್ಕಳನ್ನು ಕೇಳಿದರು ಸಹ ಇಂಗ್ಲೀಷ್ ಭಾಷೆಯ ಪದ್ಯಗಳೇ ಅವರ ಬಾಯಲ್ಲಿ ಬರುತ್ತವೆ ಪೋಷಕರಾದವರು ಈ ಕಡೆ ಗಮನ ಹರಿಸಬೇಕು. ಸಾಧ್ಯವಾದಷ್ಟೂ ಇತ್ತೀಚಿನ ಮಕ್ಕಳನ್ನು ಕವಿತೆ, ನಾಟಕ, ಸಾಹಿತ್ಯ, ಕವಿತೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇತ್ತೀಚಿನ ಜನರು ಪರಸ್ಪರ ಮಾತನಾಡುವುದೇ ಕಷ್ಟ ಆಗಿದೆ. ಅಂತಹದರಲ್ಲಿ ಕವಿತೆಗಳನ್ನು ಎಲ್ಲಿ ಕೇಳುವರು ಎಂಬ ಪ್ರಶ್ನೆಗೆ ಬಂದು ನಿಂತಿದೆ ಇತ್ತೀಚಿನ ಪ್ರಪಂಚ. ಇದೆಲ್ಲಾ ಬಹುಶಃ ನಾಲ್ವಡಿ ಕೃಷ್ಣ ರಾಜ ಒಡೆಯರಿಗೆ ಮೊದಲೇ ಅರಿವಿತ್ತೇನೋ ಅದಕ್ಕಾಗಿಯೇ ಪ್ರತಿವರ್ಷ ದಸರಾದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಕರಿಕಲ್, ಡಾ ಎಂ ದಾಸೇಗೌಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024