December 12, 2024

Newsnap Kannada

The World at your finger tips!

01 Why Are Roses So Popular For Valentines Day 528431108 nattavutluechai

ಬದುಕಿದ್ದಾಗಲೇ ಗುಲಾಬಿ ಹೂ ಕೊಡಿ…….

Spread the love

ನನಗೆ ಜೀವನ ಎಂದರೇನೆಂದು ಅರ್ಥ ಆಗಿದೆ ಬದುಕಿದ್ದಾಗ ಒಂದು ಗುಲಾಬಿ ಕೊಡಬಾರದೆ..

  • ಇದು ಅಮೇರಿಕಾದಲ್ಲಿ ನಡೆದ ನಿಜ ಜೀವನದ ಘಟನೆಯಂತೆ.

ಆ ಗಂಡ ಹೆಂಡತಿ ಇಬ್ಬರೂ ಪ್ರೀತಿಸಿ ಮದುವೆಯಾದರು. ಇಪ್ಪತ್ತು ವರ್ಷಗಳ ಕಾಲ ಹೇಗೋ ಏನೋ ಗಂಡ ಹೆಂಡಿರಂತೆ ಜೀವನ ನಡೆಸಿದರು. ಆತನಿಗೆ ಬೀಡುವಿಲ್ಲದಷ್ಟು ಕೆಲಸ.
ಮಡದಿ ಕಡೆ ಮನೆಯ ಕಡೆ ಗಮನ ಸ್ವಲ್ಪ ಕಡಿಮೆ.

ಇದ್ದಕ್ಕಿದ್ದಂತೆ ಒಂದು ದಿನ ಹೆಂಡತಿ ಕೇಳಿದಳು. ‘ನಾನು ಇಂದೇ ಸತ್ತರೆ ನನ್ನ ಅಂತ್ಯಕ್ರಿಯೆ ಹೇಗೆ ಮಾಡುತ್ತೀರಿ’ ..?.
ದಿಢೀರ್ ಪ್ರಶ್ನೆಯಿಂದ ಕೊಂಚ ವಿಚಲಿತನಾದ ಗಂಡ, ಸಾವರಿಸಿಕೊಂಡು ಉತ್ತರಿಸಿದ. ತುಂಬಾ ಪುಷ್ಪ ಹೂ ಗುಚ್ಛಗಳು, ಬೆಲೆ ಬಾಳುವ ಶವ ಪೆಟ್ಟಿಗೆ, ನಿನ್ನ ಗುಣಗಾನ ಮಾಡಿ ನಿನ್ನ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುವ ಪ್ರಾರ್ಥನೆಗಳು ಇರುತ್ತವೆ. ಅದಿರಲಿ, ಈ ಪ್ರಶ್ನೆ ಹೀಗ ಯಾಕೆ..?

ಹೆಂಡತಿ ಹೇಳಿದಳು..’ ಇದಕ್ಕೆಲ್ಲಾ ತುಂಬಾ ಖರ್ಚು ಆಗುವುದಿಲ್ಲವೆ’.. ? ಗಂಡ ಹೇಳಿದ ಹತ್ತಾರು ಸಾವಿರ ಡಾಲರ್ ಖರ್ಚು ಆಗಬಹುದು ಆದರೆ, ಅದು ನನ್ನ ಕರ್ತವ್ಯವಲ್ಲವೇ..? ಹೆಂಡತಿ ಹೇಳುತ್ತಾಳೆ.. ನಾನು ಸತ್ತ ಮೇಲೆ ಸಾವಿರಾರು ಡಾಲರ್ ಖರ್ಚು ಮಾಡಿ ನೀಡುವ ಪುಷ್ಪ ಹೂ ಗುಚ್ಛಗಳನ್ನು ನಾನು ನೋಡುವುದಿಲ್ಲ, ಬೆಲೆ ಬಾಳುವ ಶವ ಪೆಟ್ಟಿಗೆ ಯನ್ನು ನೋಡಲಾಗುವುದಿಲ್ಲ, ಗುಣಗಾನ ಮಾಡುವ ಮಾತುಗಳನ್ನು ಕೇಳಲಾಗುವುದಿಲ್ಲ, ಇವೆಲ್ಲಾ ನನಗೆ ಪ್ರಯೋಜನವಾಗುವುದಿಲ್ಲ.ಏಕೆಂದರೆ, ‘ನಾನು ಕಳೇಬರವಾಗಿರುತ್ತೇನೆ’.

ಅದರ ಬದಲು ನಾನು ಬದುಕಿರುವಾಗಲೇ ಪ್ರತೀ ದಿನ ಒಂದು ಗುಲಾಬಿ ಹೂ ಕೊಡಬಾರದೇ..?
ನಾಲ್ಕು ಪ್ರೀತಿಯ ಮಾತುಗಳನ್ನು ಆಡಬಾರದೇ..? ಪ್ರೀತಿಯಿಂದ ನನಗೆ ಇಷ್ಟ ಆಗುವ ನಾಲ್ಕು ಜೊತೆ ಒಳ್ಳೆಯ ಬಟ್ಟೆಗಳನ್ನು ನನಗೆ ತಂದು ಕೊಡಬಾರದೇ..?

ಈ ಮಾತುಗಳನ್ನು ತನ್ನ ಹೆಂಡತಿಯ ಬಾಯಿಂದ ಕೇಳಿದ ಗಂಡನ ಹೃದಯ ಕಲುಕಿತು. ಅಂದಿನಿಂದ ಅವನ ಜೀವನ ಶೈಲಿಯೇ ಬದಲಾಯಿತು.

ತಾನು ಬದುಕಿರುವಾಗಲೇ ಒಂದು ಗುಲಾಬಿ ಹೂ ಕೊಡಬಾರದೇ, ನಾಲ್ಕು ಪ್ರೀತಿಯ ಮಾತು ಆಡಬಾರದೇ,ಎಂಬ ಪ್ರಶ್ನೆ ಕೇಳಿಬರುತ್ತಿರುವುದು ಅಮೇರಿಕಾದಲ್ಲಿ ಮಾತ್ರವಲ್ಲ. ನಮ್ಮ ದೇಶದಲ್ಲಿ ನಮ್ಮ ಊರಿನಲ್ಲಿ, ನಮ್ಮ ಮನೆಗಳಲ್ಲೂ ಇಂಥ ಪ್ರಶ್ನೆ ಕೆಳಿ ಬರುತ್ತಿರಬಹು. ಆದರೆ, ನಮಗೆ ಕೇಳಿಸದೇ ಹೋಗಿರಬಹುದು. ಅವರು ಸತ್ತ ಮೇಲೆ ಒಂದು ದೊಡ್ಡ ಫೋಟೋ ಅದಕ್ಕೊಂದು ಹಾರ, ಸಂತಾಪ, ನಾಲ್ಕು ಹೊಗಳಿಕೆ ಮಾತುಗಳು, ಅವರ ಅಮೂಲ್ಯವಾದ ಸೇವೆಯ ಬಗ್ಗೆ ಭಾಷಣಗಳು, ನಿಮಿಷಗಟ್ಟಲೇ ಮೌನ, ಕೊಡಗಟ್ಟಲೇ ಕಣ್ಣೀರು, ಇವೆಲ್ಲವೂ ನಿಷ್ಪ್ರಯೋಜಕ. ಏಕೆಂದರೆ, ನಿರ್ಜೀವ ಕಳೇಬರಕ್ಕೆ ಇದ್ಯಾವುದರ ಪರಿವೆಯೂ ಇರುವುದಿಲ್ಲ. ಆ ಕಳೇಬರದ ಕಣ್ಣುಗಳಿಗೆ ಆ ಸುಂದರ ಪುಷ್ಪ ಹೂ ಗುಚ್ಛಗಳನ್ನು ನೋಡಿ ಆನಂದಿಸುವ ಶಕ್ತಿ ಇರುವುದಿಲ್ಲ.

ಬದುಕಿದ್ದಾಗ ಅವರ ಕಣ್ಣುಗಳು ಸುಂದರ ಪುಷ್ಪ ಹೂ ಗುಚ್ಛಗಳನ್ನು ನೋಡಿ ಆನಂದಿಸುವ ಶಕ್ತಿ ಇರುವಾಗ ಏಕೆ ಹೂ ಕೊಡಬಾರದು..? ಅವರ ಕಿವಿಗಳಿಗೆ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳಿ ಆನಂದಿಸುವ ಶಕ್ತಿ ಇರುವಾಗ ಏಕೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡಬಾರದು..? ಇದು ನಾವು ಅವರಿಗೆ ಸಲ್ಲಿಸಬೇಕಾದ ಸಾಲ !
ಸತ್ತಮೇಲಲ್ಲ, ಸತ್ತ ಮೇಲೆ ಹಾಕುವುದು ಪಿಂಡ !
ನಂತರದ್ದೆಲ್ಲವೂ ದಂಡ.. !!

Copyright © All rights reserved Newsnap | Newsever by AF themes.
error: Content is protected !!