ಮೊದಲೇ ಚರ್ಮಾಂಬರ ಭಸ್ಮ ಧರಿಸುವ ಶಿವನ ಬಗೆಗೆ ದಕ್ಷ ಪ್ರಜಾಪತಿಗೆ ಅಸಮಾಧಾನವಿತ್ತು. ಕಾಲಕ್ರಮೇಣ ಒಂದು ದಿನ ದಕ್ಷ ಪ್ರಜಾಪತಿಯು ಒಂದು ಯಾಗವನ್ನು ಆರಂಭಿಸಿದನು. ಪ್ರಪಂಚದ ಎಲ್ಲರಿಗೂ ಪ್ರೀತಿಯ ಆಹ್ವಾನ ನೀಡಿದರೂ ಮಗಳಾದ ದಾಕ್ಷಾಯಣಿಗೆ ಕರೆಯಲಿಲ್ಲ.
ಆದರೆ ತವರು ಮನೆಯ ವ್ಯಾಮೋಹಕ್ಕೆ ದಾಕ್ಷಾಯಣಿಯು ಯಾಗಕ್ಕೆ ಹೋಗುವುದಾಗಿ ಹಠ ಮಾಡಿದಳು ಪ್ರೀತಿಯ ಮಡದಿಯ ಮಾತನ್ನು ಒಪ್ಪದೇ ಮಡದಿಗೆ ಪರಿಪರಿಯಾಗಿ ಕರೆಯದೇ ಇರುವ ಕಡೆಗೆ ಹೋಗಬಾರದೆಂದು ತಿಳಿ ಹೇಳಿದನು. ಆದರೆ ತಾಯಿಯ ಮೇಲಿನ ಪ್ರೀತಿಗೆ ದಾಕ್ಷಾಯಣಿ ತನ್ನ ಹಠ ಬಿಡದೇ ಹೋರಟಳು ಆಗ ರುದ್ರದೇವರು ಅವಳೊಂದಿಗೆ ತನ್ನ ಗಣಗಳನ್ನು ಕಳುಹಿಸಿದನು. ಯಾಗವು ಬಹು ವಿಜೃಂಭಣೆಯಿಂದ ನಡೆಯುತ್ತಲಿತ್ತು. ಅವಳನ ಸಹೋದರಿಯರು , ದೇವತೆಗಳು ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರು.
ತಂದೆಯು ಮಗಳನ್ನು ಆದರದಿಂದ ಬರ ಮಾಡಿಕೊಳ್ಳಲಿಲ್ಲ, ನೋಡಿಯೂ ನೋಡದಂತೆ ಇದ್ದ ಆದರೆ ತಾಯಿ ಬಹು ಪ್ರೀತಿಯಿಂದ ಮಗಳನ್ನು ಬರಮಾಡಿಕೊಂಡಳು. ನಂತರ ಹವಿಸ್ಸನ್ನು ನೀಡುವಾಗ ಬೇರೆ ಎಲ್ಲಾ ದೇವತೆಗಳಿಗೂ ಹವಿಸ್ಸು ನೀಡಿ ರುದ್ರದೇವರಿಗೆ ನೀಡದೇ ಹೋದಾಗ ದಾಕ್ಷಾಯಣಿಗೆ ದುಃಖವಾಯಿತು ಆ ಕುರಿತು ಕೇಳಿದಾಗ ದಕ್ಷ ಪ್ರಜಾಪತಿಯು ರುದ್ರನನ್ನು ಹೀಯಾಳಿಸಿದನು. ತನ್ನಿಂದ ತನ್ನ ಪತಿಗೆ ಆದ ಅವಮಾನ ತಾಳಲಾರದೇ ದಾಕ್ಷಾಯಣಿಯು ಅದೇ ಅಗ್ನಿಕುಂಡದಲ್ಲಿ ಎಗರಿ ಪ್ರಾಣ ತ್ಯಾಗ ಮಾಡಿದಳು. ಇದನ್ನು ನೋಡಿದ ಗಣಗಳು ಗಲಭೆಯನ್ನು ಮಾಡಿದರು.
ಯಾಗದ ವೃತ್ತಾಂತ ತಿಳಿದ ಶಿವನು ತನ್ನ ಅಂಶನಾದ ವೀರಭದ್ರದನ್ನು ಸೃಷ್ಟಿಸಿ ಕಳುಹಿಸಿದನು. ಯಾಗದಲ್ಲಿ ಬಹಳ ಹಾನಿಯಾಗಿ ದಕ್ಷ ಪ್ರಜಾಪತಿಯ ತಲೆಯನ್ನು ಕಡಿಯಲಾಯಿತು, ಶಿವನ ಕೋಪವು ಶಾಂತವಾದ ಬಳಿಕ ದಕ್ಷನ ಮಡದಿ ಬೇಡಿಕೊಂಡ ಕಾರಣ ಆಡಿನ ಮುಖವನ್ನು ತಂದು ದಕ್ಷನ ಶರೀರಕ್ಕೆ ಸೇರಿಸಿ ಅವನನ್ನು ಬದುಕಿಸಿ ಯಾಗವನ್ನು ಮಾಡಿದರು. ಮಡದಿಯ ಮರಣದ ನಂತರ ರುದ್ರದೇವರು ಮತ್ತೆ ತಪಸ್ಸಿಗೆ ನಡೆದರು.
ಮುಂದೆ ತಾರಕಾಸುರನ ಜನ್ಮವಾಗುತ್ತದೆ. ಅವನು ತನ್ನ ತಪಸ್ಸಿನಿಂದ ಬ್ರಹ್ಮನಿಂದ ವರ ಪಡೆದು ತನ್ನ ರಾಕ್ಷಸಿ ಪ್ರವೃತ್ತಿಯಿಂದ ಜನರಿಗೆ ಉಪದ್ರವವನ್ನು ನೀಡುತ್ತಿದ್ದನು. ಅವನಿಗೆ ಶಿವ ಪಾರ್ವತಿಯರ ಮಗನಿಂದಲೇ ಸಂಹಾರ ಎಂದು ವರನ್ನು ಪಡೆದಿದ್ದನು. ಶಿವನು ತಪಸ್ಸಿನಲ್ಲಿ ನಿರತನಾಗಿದ್ದನು. ಹಿಮಾಚಲನ ಮನೆಯಲ್ಲಿ ಶೈಲಜೆಯಾಗಿ ಜನಿಸಿದಳು. ಅವಳಿಗೆ ತಪಸ್ಸನ್ನು ಆಚರಿಸಿ ಶಿವನನ್ನೇ ಪತಿಯನ್ನಾಗಿ ಪಡೆಯಬೇಕೆಂಬ ಹಂಬಲ ಬಹಳವಾಗಿತ್ತು. ಗಿರಿ ರಾಜನ ಮಗಳಾದ್ದರಿಂದ ಅವಳನ್ನು ಗಿರಿಜೆಯನ್ನುತ್ತಾರೆ. ಪರ್ವತ ರಾಜನ ಕುವರಿಯಂದು ಪಾರ್ವತಿ ಎನ್ನುತ್ತಾರೆ. ತಪಸ್ಸಿಗೆ ಹೊರಡು ನಿಂತ ಮ.ಗಳನ್ನು ಮೈನಾದೇವಿ ಕರೆದ ಕಾರಣ ಉಮಾ ಎನ್ನುತ್ತಾರೆ. ಒಂದೇ ಪರ್ಣವನ್ನು ತಿಂದು ತಪಸ್ಸನ್ನಾಚರಿಸಿದ ಕಾರಣ ಅಪರ್ಣ ಎನ್ನುತ್ತಾರೆ. ಹೀಗೆ ಪಾರ್ವತಿ ದೇವಿಯು ರುದ್ರದೇವರೇ ಪತಿಯಾಗ ಬೇಕೆಂದು ಬಹಳ ಉಗ್ರವಾದ ತಪಸ್ಸನ್ನು ಆಚರಿಸುತ್ತಾಳೆ. ಶಿವನು ದಾಕ್ಷಾಯಣೆಯ ಮರಣಾನಂತರ ಎಲ್ಲ ಕಡೆಗೆ ಅಲೆದನು ತಪಸ್ಸನ್ನಾಚರಿಸಿದನು. ಒಮ್ಮೆ ಗಿರಿರಾಜನು ಶಿವನಿಗೆ ತನ್ನಲ್ಲೇ ನೆಲೆ ನಿಲ್ಲುವಂತೆ ಬೇಡಿಕೊಂಡನು. ಆಗ ಶಿವನು ಪಾರ್ವತಿಯನ್ನು ನೋಡಿದನು. ಬಹಳ ಹೊತ್ತು ದಿಟ್ಟಿಸಿ ನೋಡಿದನು ಅಲ್ಲಿ ಇರಲಾರದೇ ತನ್ನ ಗಣಗೊಳೊಂದಿಗೆ ಅಂತರ್ಧಾನನಾದನು. ಪಾರ್ವತಿಯು ಶಿವನನ್ನೇ ತನ್ನ ಪರಿಯನ್ನಾಗಿ ಪಡೆಯ ಬೇಕೆಂದು ನಿಶ್ಚಯಿಸಿ ತಪಸ್ಸಿಗೆ ಹೊರಟಳು. ಅವಳ ತಪಸ್ಸನ್ನು ನೋಡಿ ಶಿವನು ಮೆಚ್ಚಿದನು ಆದರೆ ಅವಳನ್ನು ಮತ್ತಷ್ಟು ಪರೀಕ್ಷಿಸುವ ದೃಷ್ಟಿಯಿಂದ ಬ್ರಾಹ್ಮಣ ವಟುವಿನ ವೇಷದಲ್ಲಿ ಬಂದು ಶಿವನನ್ನೇ ಏಕೆ ಮುವೆಯಾಗಬೇಕೆಂದು ನಿರ್ಣಯಿಸಿದ್ದೀಯೇ? ಅವನಿಗೆ ಮನೆ ಇಲ್ಲ, ಮೈಗೆ ಭಸ್ಮ ಧರಿಸಿರುತ್ತಾನೆ, ಕೊರಳಿಗೆ ನಾಗನನ್ನು ತಲೆಗೆ ಚಂದ್ರನನ್ನು ಆಭರಣವನ್ನಾಗಿ ಧರಿಸಿರುತ್ತಾನೆ. ಹೀಗೆ ಅನೇಕ ವಿಷಯಗಳನ್ನು ಎತ್ತಿ ಆಡಿ ಟೀಕಿಸಲು ಆರಂಭಿಸಿದನು. ಪಾರ್ವತಿಯು ನೀನು ಬ್ರಾಹ್ಮಣನಿದ್ದೀಯ ನಿನಗೆ ಬೈಯ್ಯುವ ಬದಲಿಗೆ ನಾನೇ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೊರಟು ನಿಂತಳು. ಆಗ ಶಿವನು ತನ್ನ ನಿಜ ಸ್ವರೂಪದಲ್ಲಿ ಬಂದು ತಪಸ್ಸು ಮಾಡಿದ್ದು ಸಾಕು ನೀನು ನಿನ್ನ ತಂದೆಯ ಮನೆಗೆ ಹೋಗು ನಾನು ನಿನ್ನೊಂದಿಗೆ ವಿವಾಹದ ವಿಷಯನ್ನು ಮಾತನಾಡಲು ಕಳುಹಿಸುತ್ತೇನೆ ಎಂದನು, ಗಿರಿಜೆಯನ್ನು ಹಿಮವಂತನ ಮನೆಗೆ ಕಳುಹಿಸಿದನು.
ನಂತರ ಶಿವನು ಸಪ್ರರ್ಷಿಗಳನ್ನು ಕರೆಯಿಸಿ ಪಾರ್ವತಿಯ ಬಗೆಗೆ ಮಾತನಾಡಿ . ಗಿರಿರಾಜನ ಮನೆಗೆ ಹೆಣ್ಣು ಕೇಳಲು ಹೋಗಿರೆಂದು ಹೇಳಿದನು. ಸಪ್ರರ್ಷಿಗಳು ಅರುಂಧತಿಯೊಡಗೂಡಿ ಹಿಮವಂತನ ಮನೆಗೆ ಶಿವನಿಗೆ ಹೆಣ್ಣು ಕೇಳಲು ಹೊರಟರು. ಮನೆಗೆ ಬಂದ ಋಷಿಗಳನ್ನು ಆದರಿಸಿ ವಿಷಯವನ್ನು ಕೇಳಿದಾಗ ಹಿಮವಂತನು ತನ್ನ ಮಗಳನ್ನು ಕರೆದು ಅವಳ ಒಪ್ಪಿಗೆಯನ್ನು ಕೇಳಿದನು, ಅವಳ ಸಮ್ಮತಿ ಪಡೆದು, ನಂತರ ತನ್ನ ಬಾಂಧವರನ್ನೆಲ್ಲಾ ಸೇರಿಸಿ ಕೂಡಿ ಮುದುವೆಯ ಪ್ರಸ್ತಾಪವನ್ನು ಮಾಡಿ ಮಗಳ ಅಭಿಪ್ರಾಯವನ್ನು ತಿಳಿಸಿದನು. ಅವರೆಲ್ಲರ ಒಪ್ಪಿಗೆ ಪಡೆದು ಒಂದೊಳ್ಳೇ ಮುಹೂರ್ತದಲ್ಲಿ ಶಿವ -ಪಾರ್ವತಿಯ ಮದುವೆಯ ನಿಶ್ಚಯವಾಯಿತು. ಮಾಘ ಕೃಷ್ಣ ತ್ರಯೋದಶಿಯಂದು ಶಿವ ಪಾರ್ವತಿಯ ಮುದವೆ ನಡೆಯುತ್ತದೆಂದು ಹೇಳಲಾಗುತ್ತದೆ. ಅಂದಿನ ದಿನವನ್ನು ಹಿಂದುಗಳೆಲ್ಲರೂ ಶಿವ ರಾತ್ರಿಯಂದು ಆಚರಿಸುತ್ತಾರೆ. ವಿವಾಹದ ನಂತರ ಶಿವ ಪಾರ್ವತಿಯರು ಭಕ್ತರ ವೀಕ್ಷಣೆಗಾಗಿ ಸಂಚಾರ ಮಾಡುತ್ತಾರೆಂದೂ ಹೇಳುತ್ತಾರೆ.
ಶಿವ ಪಾರ್ವತಿಯರ ವಿವಾಹದ ಉದ್ದೇಶ ತಾರಕಾಸುರ ಮತ್ತು ಮಹಿಷಾಸುರ ವಧೆಯಂದು ಅನೇಕ ಕಥೆಗಳಲ್ಲಿ ಪ್ರಚಲಿತವಿದೆ. ವಾಮನ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಶಿವ ಪುರಾಣ ಎಲ್ಲ ಪುರಾಣಗಳಲ್ಲಿ ಮಂಗಳಮಯವಾದ ಶಿವ ಪಾರ್ವತಿಯ ಕಲ್ಯಾಣದ ಕಥೆಗಳಿವೆ, ಈ ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಹರಕೆ ತೀರಿಸಲು, ಮದುವೆ ಆಗುವ ಸಲುವಾಗಿ ಆಗಾಗ ಪಾರ್ವತಿ ಕಲ್ಯಾಣ ಮಹೋತ್ಸವವನ್ನು ಮಾಡಿ ಸಂಭ್ರಮಿಸುತ್ತಾರೆ.
ಪ್ರಪಂಚದ ಬಹಳಷ್ಟು ಕಡೆಗಳಲ್ಲಿ ಶೈ ವರೇ ಬಹಳಷ್ಟು ಜನರಿರುವ ಕಾರಣ ಅನೇಕ ಶಿವ ಗ್ರಂಥಗಳು ರಚನೆಯಾಗಿವೆ. ಕನ್ನಡದಲ್ಲಿ ಗಿರಿಜಾ ಕಲ್ಯಾಣದ ಪ್ರಮುಖ ರಚನೆಗಳು ಹರಿಹರನ ಗಿರಿಜಾ ಕಲ್ಯಾಣ ರಗಳೆ ಮತ್ತು ಪುರಂದರ ದಾಸರ ಎಪ್ಪತ್ತು ನುಡಿಗಳುಳ್ಳ “ಪಾರ್ವತಿ ಕಲ್ಯಾಣ” ಕೃತಿಯಾಗಿದೆ. ಇದಲ್ಲದೇ ಅನಾಮಧೇಯ ದಾಶರೊಬ್ಬರು, ಅವರ ಹೆಸರು ತಿಳಿದಿಲ್ಲ ಆದರೆ ಅವರ ಅಂಕಿತ ಪ್ರಸನ್ನ ವೆಂಕಟವಾಗಿದೆ. ಆದರೆ ಈ ಗಿರಿಜಾ ಕಲ್ಯಾಣ ಪ್ರಸನ್ನ ವೆಂಕಟ ದಾಸರ ಕೃತಿ ಅಲ್ಲ. ಪುರಂದರ ದಾಸರ ಈ ಕೃತಿಯನ್ನು ಅವಿವಾಹಿತ ಹುಡುಗ/ಹುಡುಗಿ ಪಾರಾಯಣ ಮಾಡಿದರೆ ಮದುವೆ ಬೇಗ ಆಗುವುದು ಎನ್ನುವ ಪ್ರತೀತಿ ಇದೆ. ಇದರಂತೆಯೇ ದಾಂಪತ್ಯದಲ್ಲಿ ಸಮಸ್ಯೆಯುಂಟಾದಾಗ ಶಿವ ಪಾರ್ವತಿಯರ ಪೂಜೆಯನ್ನು ಅವರ ಕುರಿತಾದ ಹಾಡು ಶ್ಲೋಕಗಳ ಪಠನೆಯನ್ನು ಹೇಳುತ್ತಾರೆ.
ಇಂದಿನ ಯುಗದಲ್ಲಿ ಎಲ್ಲ ಭಾಷೆಗಳಲ್ಲೂ ಕೂಡ ಗಿರಜಾ ಕಲ್ಯಾಣ ಸಿನೆಮಾಗಳು ಮೂಡಿ ಬಂದಿವೆ. ಅನೇಕ ಭಾಷೆಗಳಲ್ಲಿ ಧಾರವಾಹಿಯಾಗಿಯೂ ಬರುತ್ತಲೇ ಇದೆ. ಗಿರಿಜಾ ಕಲ್ಯಾಣವು ಲೋಕ ಕಲ್ಯಾಣಕ್ಕಾಗಿಯೇ ಅಂದು ಕೂಡ ತಾರಕಾಸುರ ವಧೆಯ ಸಲುವಾಗಿ ವಿವಾಹವಾಗಿ ಕಾರ್ತಿಕೇಯನ ತಂದೆ ತಾಯಿಯಾದರು. ಸಮಾಜಕ್ಕೆ ಬಹಳಷ್ಟು ನೀತಿಯನ್ನು ಕೂಡ ಬೋಧನೆ ಮಾಡಿರುವರು. ದಕ್ಷನ ಪ್ರಸಂಗದಲ್ಲಿ ಸಣ್ಣವರೇ ಇದ್ದರೂ ಕೂಡ ಯೋಗ್ಯತೆ ದೊಡ್ಡದಿದ್ದಾಗ ಅಹಂಕಾರವನ್ನು ಮಾಡಬಾರದು, ದ್ವೇಷ ಸಿಟ್ಟನ್ನು ಬೆಳೇಸಿಕೊಳ್ಳಬಾರದು, ಕರೆಯದೇ ಇರುವವರ ಮನೆಗೆ ಹೋಗಬಾರದು ಎಂಬೆಲ್ಲಾ ಪಾಠವನ್ನು ಕಲಿಸಿದರೆ.
ಪಾರ್ವತಿಯ ತಪಸ್ಸು ಹೆಣ್ಣುಮಕ್ಕಳು ಕೂಡ ಏಕಾಗ್ರತೆಯಿಂದ ಬಯಸಿದ್ದು ಪಡೆಯಬಹುದೆಂದು ಜೊತೆಗೆ ದೊಡ್ಡವರ ಪ್ರೀತಿ ಪಾತ್ರರ ನಿಂದನೆಯನ್ನು ಕೇಳಬಾರದು, ಪ್ರೀತಿಯನ್ನು ಹೊಂದಿದ್ದರೂ ಕೂಡ ತಂಧೆ ತಾಯಿ ಗುರು ಹಿರಿಯರ ಆಶೀರ್ವಾದ ಪಡೆಯದೇ ಮದುವೆಯಾಗಬಾರದು, ಹೆಣ್ಣು ಕೇಳುವಾಗ ಬಂಧು ಬಾಂಧವರು ಎಲ್ಲರೂ ಒಟ್ಟಿಗೆ ಹೋಗಿ ಗಂಡಿನ ಗುಣಗಳು ಶಕ್ತಿ ಸಾಮರ್ಥ್ಯದ ಗುಣಗಾನ ಮಾಡಿ ಹೆಣ್ಣು ಕೇಳಬೇಕು, ಯಾವುದೇ ತಂದೆಯಾದರೆ ಮಗಳ ಒಪ್ಪಿಗೆ ಪಡೆಯಬೇಕು ಜೊತೆಗೆ ಸಂಬಂಧಿಕರೆಲ್ಲರ ಆಬಿಪ್ರಾಯ ಕೇಳಿ ಅವರನ್ನು ಒಪ್ಪಿಗೆ ಪಡೆದು ಮದುವೆಯನ್ನು ಮಾಡಬೇಕೆಂಬ ಲೌಕಿಕ ನೀತಿಯನ್ನು ಗಿರಿಜಾ ಕಲ್ಯಾಣ ನೀಡುತ್ತದೆ.
ಪೌರಾಣಿಕ ಕಥೆಗಳು ನಮಗೆ ಮಾರ್ಗ ದರ್ಶನ ನೀಡುವುದಲ್ಲದೇ ವೈಜ್ಞಾನಿಕವಾದ ವಿಷಯಗಳನ್ನು ಸಾಮಾಜಿಕ ಪಾಠವನ್ನು ಬದುಕಬೇಕಾದ ಮಾರ್ಗವನ್ನು ತೋರಿಸುತ್ತದೆ. ಪ್ರತೀ ವರ್ಷವೂ ಶಿವ ರಾತ್ರಿಯಂದು ಮದುವೆಯಾದ ಕಾರಣ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ . ಭಕ್ತರು ಜಾವ ಜಾವದ ಪೂಜೆ ಉಪವಾಸ ಮತ್ತು ಜಾಗರಣೆಯನ್ನು ಮಾಡುತ್ತಾರೆ. ಶಿವ ಪಾರ್ವತಿಯರು ಭಕ್ತರ ಮನೋರಥ ಇಡೇರಿಸಲು ಬರುತ್ತಾರೆಂಬ ಪ್ರತೀತಿ ಇದೆ.
ಕನ್ನಡ ದಾಸಸಾಹಿತ್ಯದಲ್ಲಿ ಪುರಂದರ ದಾಸರು ರಚಿಸಿದ ಪಾರ್ವತಿ/ ಗಿರಿಜಾ ಕಲ್ಯಾಣ 74 ನುಡಿಗಳ ಕಿರು ಕಾವ್ಯವಾಗಿದ್ದು ಇಂದಿಗೂ ಕೂಡ ಲೋಕ ಕಲ್ಯಾಣಕ್ಕೆ, ಎಲ್ಲ ಸಮಸ್ಯೆಗಳ ಪರಿಹಾರರ್ಥ, ಮುಖ್ಯವಾಗಿ ಮದುವೆಯ ಸಲುವಾಗಿ ಪಾರಾಯಣ ಮಾಡುತ್ತಾರೆ. ಅದಲ್ಲದೆ ಸತಿ ಪತಿಯರಲ್ಲಿ ವಿಶೇಷ ಪ್ರೀತಿ ಹಾಗೂ ವಿಶ್ವಾಸಕ್ಕಾಗಿ, ದೀರ್ಘಕಾಲದ ಪತಿಯ ಆಯಸ್ಸಿಗಾಗಿಯೂ ಇಂದಿಗೂ ದಿನ ನಿತ್ಯವೂ ಪಾರ್ವತಿ ಕಲ್ಯಾಣವನ್ನು ಪಠಿಸುತ್ತಾರೆ.
ಮಾಧುರಿ ದೇಶಪಾಂಡೆ, ಬೆಂಗಳೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು