December 23, 2024

Newsnap Kannada

The World at your finger tips!

punith parva

ಬೆಂಗಳೂರಿನಲ್ಲಿ ಇಂದು ಸಂಜೆ ‘ಪುನೀತ್ ಪರ್ವ ‘- ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ದತೆ

Spread the love

ಅ. 28 ರಂದು ಗಂಧದಗುಡಿ ಚಿತ್ರ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​ನಲ್ಲಿ ಇಂದು ಸಂಜೆ ವೇಳೆ ‘ಪುನೀತ ಪರ್ವ’ ಬಹಳ ಅದ್ಧೂರಿಯಾಗಿ ನಡೆಯಲಿದೆ.

ಗಂಧದಗುಡಿ ಪ್ರಿ-ರಿಲೀಸ್​ ಇವೆಂಟ್​ ಗೆ ಅರಮನೆ ಮೈದಾನದಲ್ಲಿ ಸಕಲ ತಯಾರಿಯೂ ಪೂರ್ಣಗೊಂಡಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಯುವ ಹಾಗೂ ವಿನಯ್ ರಾಜ್ ಕುಮಾರ್ ಎಲ್ಲರೂ ಪ್ಯಾಲೇಸ್​ ಗ್ರೌಂಡ್​ನಲ್ಲಿ ಪ್ರಿಪರೇಷನ್ ಹೇಗೆ ಆಗ್ತಿದೆ ಅಂತ ಪರಿಶೀಲನೆ ಮಾಡಿದ್ದಾರೆ.

‘ಪುನೀತ ಪರ್ವ’ವನ್ನು ಬಹಳ ದೊಡ್ಡದಾಗಿ ನಡೆಸಲು ಅಶ್ವಿನಿ ಮತ್ತು ತಂಡ ನಿರ್ಧರಿಸಿದ್ದಾರೆ ಅದಕ್ಕಾಗಿ 5 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ. 7500 ಅಡಿ LED ಸ್ಕ್ರೀನ್ ಅಳವಡಿಕೆ ಮಾಡಲಾಗಿದ್ದು, 3000 ಸಾವಿರಕ್ಕೂ ಹೆಚ್ಚು ಅಸನದ ವ್ಯವಸ್ಥೆ ಇರಲಿದೆ. ಇನ್ನು ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ವಿವಿಐಪಿಗಳು, 5000 ವಿಐಪಿಗಳು ಭಾಗಿಯಾಗಲಿದ್ದಾರಂತೆ.

ಪುನೀತ ಪರ್ವಕ್ಕೆ ಭಾರತೀಯ ಸಿನಿಮಾರಂಗದ ಸೂಪರ್​ಸ್ಟಾರ್​ಗಳಿಗೆಲ್ಲಾ ಆಹ್ವಾನ ನೀಡಲಾಗಿದೆ. ಚಿರಂಜೀವಿ, ಕಮಲ್ ಹಾಸನ್, ರಜನಿಕಾಂತ್, ಸೂರ್ಯ, ಸೇರಿ ಹಲವು ಪರಭಾಷೆ ತಾರೆಯರು ಇವೆಂಟ್​ಗೆ ಬರೋ ನಿರೀಕ್ಷೆಯಿದೆ. ಶಿವಣ್ಣ, ಮೋಹಕತಾರೆ ರಮ್ಯಾ ಹಾಗೂ ಪ್ರಭುದೇವ ಅವರಿಂದ ಸ್ಪೆಷಲ್ ಪರ್ಫಾಮೆನ್ಸ್ ಪ್ಲಾನ್ ಆಗಿದ್ದು, ಥ್ರಿಲ್ ಹೆಚ್ಚಿಸಿದೆ.

ಗಂಧದಗುಡಿ ಇವೆಂಟ್​ಗೆ ವೈಟ್ ಕಲರ್​ ಡ್ರೆಸ್​ಕೋಡ್​ಇದೆ ಬರುವ ಗಣ್ಯರೆಲ್ಲರು ಬಿಳಿಬಣ್ಣದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಅ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!