ಬೆಂಗಳೂರು: 2025ನೇ ಸಾಲಿನ BMTC ನೌಕರರ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಸಂಸ್ಥೆಯ ನೌಕರರ ವರ್ಗಾವಣೆ ನೀತಿ ಜಾರಿಗೆ ಬರುವುದಾಗಿ ತಿಳಿಸಲಾಗಿದೆ.
ವರ್ಗಾವಣೆಯ ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರರು ಸೇವೆಯಲ್ಲಿ ಖಾಯಂಗೊಂಡಿರಬೇಕು.
- ಸಾಮಾನ್ಯ ವರ್ಗಾವಣೆಗಾಗಿ, ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು.
- ಪರಸ್ಪರ ವರ್ಗಾವಣೆಗೆ, ಇಬ್ಬರು ಅರ್ಜಿದಾರರು ಪ್ರಸ್ತುತ ಕಾರ್ಯಸ್ಥಳದಲ್ಲಿ ಕನಿಷ್ಠ 1 ವರ್ಷ ಸೇವೆ ಸಲ್ಲಿಸಿರಬೇಕು.
- ಶಿಸ್ತು ಪ್ರಕರಣಗಳು ಅಥವಾ ಆರೋಪಣಾ ಪತ್ರ ಹೊಂದಿದ ನೌಕರರು ಅರ್ಹರಲ್ಲ.
ವಿಶೇಷ ಆದ್ಯತೆ ನೀಡುವ ಪ್ರಕರಣಗಳು:
- ತೀವ್ರ ಅನಾರೋಗ್ಯದ ಪ್ರಕರಣಗಳು.
- 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆ/ವಿಧುರ.
- ಶೇಕಡಾ 40 ಅಥವಾ ಹೆಚ್ಚಿನ ಅಂಗವಿಕಲತೆ ಹೊಂದಿರುವವರು.
- ಪತಿ-ಪತ್ನಿ ಸರ್ಕಾರಿ ನೌಕರರ ಪರಿ.
- ನಿವೃತ್ತಿಗೆ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಇರುವವರು.
ವರ್ಗಾವಣೆಯ ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿಗಳನ್ನು ಕಡ್ಡಾಯವಾಗಿ EMS login ಮೂಲಕ ಆನ್‌ಲೈನ್ ಮೂಲಕ ಸಲ್ಲಿಸಬೇಕು.
- ಅರ್ಜಿಗಳನ್ನು 2025ರ ಫೆಬ್ರವರಿ 1ರಿಂದ 28ರ ಸಂಜೆ 6 ಗಂಟೆ ಒಳಗಾಗಿ ಸಲ್ಲಿಸಬೇಕು.
- ಮೂರು ಆಧ್ಯತೆ ಸ್ಥಳಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಪ್ರತಿಯನ್ನು ತಿದ್ದುಪಡಿಯೊಂದಿಗೆ ಘಟಕ ವ್ಯವಸ್ಥಾಪಕರಿಗೆ ಸಲ್ಲಿಸಬೇಕು.ಇದನ್ನು ಓದಿ –ಭೀಕರ ದುರಂತ : ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 11 ಮಂದಿ ಸಾವು
ವಿಭಿನ್ನ ಅನಾರೋಗ್ಯ ಮತ್ತು ವಿಶೇಷ ಕಾರಣಗಳ ಆಧಾರದಲ್ಲಿ ಅರ್ಹತೆಗಳನ್ನು ಪರಿಶೀಲಿಸಿ, ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರವೇ ವರ್ಗಾವಣೆಯನ್ನು ಪೂರ್ಣಗೊಳಿಸಲಾಗುವುದು.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು