ಬೆಂಗಳೂರು : ಟೊಮೆಟೋ, ಈರುಳ್ಳಿ ದರ ಕೆಲ ದಿನಗಳ ಹಿಂದೆ ಶತಕ ಬಾರಿಸಿದ್ದವು. ಇದೀಗ ಬೆಳ್ಳುಳ್ಳಿ ಕೆ.ಜಿಗೆ 500ರ ಗಡಿ ದಾಟಿ ಸಾರ್ವಜನಿಕರಿಗೆ ಶಾಕ್ ನೀಡಿದೆ.
ಬೆಳ್ಳುಳ್ಳಿ ಬಳಸುವುದರಿಂದ ಅಡುಗೆಗಳ ರುಚಿ ಹೆಚ್ಚಾಗುವುದು , ಆದರೆ ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ (Garlic Rate) ಬೆಲೆ ಏರಿಸಲಾಗಿದೆ.
ಹಾಪ್ ಕಾಮ್ಸ್‍ನಲ್ಲಿ ಬೆಳ್ಳುಳ್ಳಿ ಕೆ.ಜಿಗೆ 500ರ ಗಡಿ ದಾಟಿದ್ದು , ಬಿಡಿಸಿದ ಬೆಳ್ಳುಳ್ಳಿ 540 ರೂ. ಮತ್ತು ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ.
ಈ ವರ್ಷ ಸರಿಯಾಗಿ ಮಳೆಯಾಗದೆ ಇರುವುದು ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ. ಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ ಮತ್ತು ಬೆಳಗಾವಿ ಭಾಗಗಳಿಂದ ಬರುವ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ .ವನ್ಯಜೀವಿ ಅಂಗಾಂಗಗಳನ್ನು ಏಪ್ರಿಲ್ 10ರ ಒಳಗಡೆ ವಾಪಸ್ ನೀಡಿ – ಈಶ್ವರ್ ಖಂಡ್ರೆ
ಇದರಿಂದಾಗಿ ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳುವ ಗೃಹಿಣಿಯರು 100 ಗ್ರಾಂ, 200 ಗ್ರಾಂ ಖರೀದಿಸುವ ಪರಿಸ್ಥಿತಿ ಕಂಡು ಬರುತ್ತಿದೆ .


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು