ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಈ ಗುಂಡಿನ ದಾಳಿಯಲ್ಲಿ ಗ್ಯಾಂಗ್ ಸ್ಟರ್ ಜಿತೇಂದ್ರ ಯೋಗಿ ಸೇರಿ ನಾಲ್ವರು ಸಾವನ್ನಪ್ಪಿದ್ದು, 6 ಜನ ಗಾಯಗೊಂಡಿದ್ದಾರೆ.
ಹರಿಯಾಣ ಮೂಲದಗ್ಯಾಂಗ್ ಸ್ಟರ್ ಜಿತೇಂದ್ರ ಯೋಗಿ ಎಂಬಾತನನ್ನು ಇಂದು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು.
ರೂಂ ನಂಬರ್ 207ರಲ್ಲಿ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ವಕೀಲರ ವೇಷದಲ್ಲಿ ಬಂದ ಹಂತಕರು ಜಿತೇಂದ್ರ ಯೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಇಬ್ಬರು ಹಂತಕರ ಮೇಲೆ ಫೈರಿಂಗ್ ಮಾಡಿ ಇಬ್ಬರನ್ನು ಹೊಡೆದುರುಳಿಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ