ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್ನಿಂದ ಗಂಗಮ್ಮ ಭಾರಿ ಸುದ್ದು ಮಾಡಿದ್ದರು. ಅವರು ಮುದ್ರಿಸಿ ಹಂಚಿಕೆ ಮಾಡಿದ್ದ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಜಾಲಾಡಿ ಹೋಗಿತ್ತು. ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ನಾನು ಗೆದ್ದರೆ ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂದು ಹಲವಾರು ಭರವಸೆ ನೀಡಿದ್ದರು. ಸೋತರೆ ಗ್ರಾಮದಲ್ಲಿ ನಡೆದಿರುವ ಅಕ್ರಮ ಗಳನ್ನು ಬಯಲಿಗೆ ಎಳೆಯುತ್ತೇನೆ ಅನ್ನುವ ಅರ್ಥದಲ್ಲಿ ಕರ ಪತ್ರದಲ್ಲಿ ಬ್ಲ್ಯಾಕ್ ಮೇಲ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಆ ಗ್ರಾಮದ ಮತದಾರರು ಗಂಗಮ್ಮ ನನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ.
ಗಂಗಮ್ಮ ಪಡೆದ ಮತ ಕೇವಲ ಆರು:
ಗಂಗಮ್ಮ ಹಂಚಿಕೆ ಮಾಡಿದ್ದ ಕರಪತ್ರ
ಭಾರಿ ವೈರಲ್ ಆಗಿತ್ತು. ಗೆಲುವಿನ ಜೊತೆ ಸೋತರೆ ಏನು ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು.
ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡುತ್ತೇನೆ, ಸರ್ವೇ ನಂಬರ್ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಸೇರಿ ಹಲವು ಭರವಸೆಗಳನ್ನು ನೀಡಿದ್ದರು.
ಈ ಗಂಗಮ್ಮ ಗೆದ್ದರೆ ಮಾಡುವುದು ಅಷ್ಟರಲ್ಲೇ ಇದೆ. ಸೋಲಿಸಿದರೆ ಅದೇ ಏನೂ ಮಾಡುತ್ತಾರೋ ನೋಡೋಣ ಎಂಬ ತೀರ್ಮಾನ ಮಾಡಿದ ಮತದಾರರು ಕೇವಲ 6 ಮತಗಳನ್ನು ಮಾತ್ರ ನೀಡಿದ್ದಾರೆ.
ಒಂದು ಆಶ್ಚರ್ಯಕರ ಸಂಗತಿ ಎಂದರೆ ಚುನಾವಣಗೆ ಸ್ಪರ್ಧಿಸಿದ್ದ ಗಂಗಮ್ಮ ನೇ ಮತದಾನದ ದಿನ ಮತಗಟ್ಟೆ ಬಂದು ಮತ ಹಾಕಲಿಲ್ಲ. ಎಲ್ಲೋ ಹೋಗಿದ್ದರೆಂದು ಗ್ರಾಮದ ಕೆಲವರು ಹೇಳುತ್ತಾರೆ.
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ