ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಕಾರ್ಬನ್ ಡೇಟ್ ಪರೀಕ್ಷೆಗೆ ಅನುಮತಿ ನೀಡಲು ವಾರಣಸಿ ಕೋರ್ಟ್ ನಿರಾಕರಿಸಿದೆ.
ಗ್ಯಾನ್ವಾಪಿ ಮಸೀದಿಯ ವಜೂಖಾನಾದಲ್ಲಿ ಪತ್ತೆಯಾಗಿರುವ ಶಿವಲಿಂಗ ಮಾದರಿಯ ನೈಜತೆ ಅರಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತೆ ಕೋರಿ ವಾರಣಸಿ ಕೋರ್ಟ್ಗೆ ನಾಲ್ವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು . ಈ ಅರ್ಜಿಗಳ ವಿಚಾರಣೆಯನ್ನು ನಡೆಸಿ ಇಂದು ಕೋರ್ಟ್ ತೀರ್ಪು ನೀಡಿದ್ದು, ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಮುರುಘಾ ಸ್ವಾಮಿ ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಚಟವಿದೆ : ಒಡನಾಡಿ ಆರೋಪ
ಕಾರ್ಬನ್ ಡೇಟ್ ಅಂದ್ರೆ ಪ್ರಾಚೀನ ವಸ್ತುಗಳ ಕಾಲ ನಿರ್ಧರಿಸುವ ವೈಜ್ಞಾನಿಕ ಪರೀಕ್ಷೆಯಾಗಿದೆ. ಕಾರ್ಬನ್ ಡೇಟಿಂಗ್ನಿಂದ ವಿಗ್ರಹಗಳ ಕಾಲಾವಧಿ ತಿಳಿಯುತ್ತದೆ. 50 ಸಾವಿರ ವರ್ಷಗಳ ಹಿಂದಿನ ಕಾಲಮಾನ ತಿಳಿಯಬಹುದು.
ವಸ್ತುವಿನ ಮೇಲೆ ಉಳಿದಿರುವ ಕಾರ್ಬನ್ ಆಧರಿಸಿ ಪರೀಕ್ಷೆ ಮಾಡಲಾಗುತ್ತೆ. ಗಟ್ಟಿಯಾಗಿರುವ ವಸ್ತು ಮೇಲೆ ಪ್ರಯೋಗ ಮಾಡುವ ವಿಧಾನವಾಗಿದೆ. ಮೂಳೆ, ಮರದ ಮೇಲೆ ಪ್ರಯೋಗ ಮಾಡಲಾಗುತ್ತೆ, ಕಾರ್ಬನ್ ಡೇಟಿಂಗ್ನಿಂದ 90% ರಷ್ಟು ಕಾಲಮಾನ ನಿರ್ಧಾರ ಆಗಲಿದೆ.
ಅಮೆರಿಕದ ಚಿಕಾಗೋ ವಿವಿಯಲ್ಲಿ ವಿಲ್ಲಾರ್ಡ್ ಲಿಬ್ಬಿಯಿಂದ ಅಭಿವೃದ್ಧಿ ಆಗಿದ್ದು 1940ರಿಂದಲೇ ಕಾರ್ಬನ್ ಡೇಟಿಂಗ್ ವಿಧಾನ ದೃಢಪಟ್ಟಿದೆ. ಅಯೋಧ್ಯೆ ರಾಮಮಂದಿರ ಬಳಿಕ ಭಾರೀ ಸುದ್ದಿ ಮಾಡಿದ್ದು ಕಾಶಿಯ ಗ್ಯಾನವಾಪಿ ಮಸೀದಿ ಪ್ರಕರಣ. ಮಸೀದಿಯಲ್ಲಿ ಪತ್ತೆಯಾಗಿರುವ ಕಲ್ಲಿನಮೂರ್ತಿ ಶಿವಲಿಂಗ ಹೌದೋ, ಅಲ್ಲವೋ ಎನ್ನುವ ಬಗ್ಗೆ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತೆ ಹಿಂದೂ ಪರ ಅರ್ಜಿದಾರರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು