January 9, 2025

Newsnap Kannada

The World at your finger tips!

gajapade

ಸಫಾರಿ ವಾಹನವನ್ನೇ ಬೆನ್ನಟ್ಟಿದ ಗಜಪಡೆ – ಪ್ರವಾಸಿಗರು ಬಚಾವ್

Spread the love

ಅದೊಂದು ಎದೆ ನಡುಗಿಸುವ ದೃಷ್ಯ.
ಸಫಾರಿ ವಾಹನವನ್ನೇ ಬೆನ್ನಟ್ಟಿದ ಆನೆಗಳ ಹಿಂಡು ಪ್ರವಾಸಿಗರ ಎದೆ ನಡುಗಿಸಿದ ಘಟನೆ ಬಂಡಿಪುರ ಅಭಯಾರಣ್ಯದಲ್ಲಿ ಜರುಗಿದೆ.

ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ನಡೆದಿರುವ ಈ ಘಟನೆಯಲ್ಲಿ ಸಫಾರಿ ವಾಹನ ತೆರಳುತ್ತಿದ್ದ ವೇಳೆ ಆನೆಗಳ ಹಿಂಡು ಅಟ್ಟಿಸಿಕೊಂಡು ಓಡಿ ಬಂದಿತು. ಆ ವೇಳೆ ವೇಗವಾಗಿ ವಾಹನ ಚಲಾಯಿಸುತ್ತಾ ದಾಳಿಯಿಂದ ಪ್ರವಾಸಿಗರು ತಪ್ಪಿಸಿಕೊಂಡರು. .

ಒಂದು ಆನೆ ಪ್ರವಾಸಿಗರಿದ್ದ ವಾಹನವನ್ನು ಬೆನ್ನಟ್ಟುತ್ತಿರುವುದನ್ನು ಕಂಡು ಇಡೀ ಆನೆಗಳ ಗುಂಪೇ ಅದನ್ನು ಹಿಂಬಾಲಿಸುತ್ತಾ ಬಂದಿವೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಅಟ್ಟಿಸಿ ಕೊಂಡ ಬಂದ ಕಾಡಾನೆಗಳ ಹಿಂಡು ಈ‌ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Copyright © All rights reserved Newsnap | Newsever by AF themes.
error: Content is protected !!