December 24, 2024

Newsnap Kannada

The World at your finger tips!

school , learning , teaching

ಇಂದಿನಿಂದ. 6-8ನೇ ಕ್ಲಾಸ್​​ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದಲ್ಲಿ ಶಾಲೆಗಳು ಶುರು‌

Spread the love

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾಚ್೯ ನಿಂದ ಮುಚ್ಚಿದ್ದ ಶಾಲೆಗಳು ಹಂತ ಹಂತವಾಗಿ ಬಾಗಿಲು ತೆರೆಯುತ್ತಿವೆ.

ಈಗಾಗಲೇ ಪದವಿ, ಪಿಯುಸಿ, ಎಸ್​ಎಸ್​ಎಲ್​ಸಿ ತರಗತಿಗಳು ಆರಂಭವಾಗಿವೆ. ರಾಜ್ಯದಲ್ಲಿ ಇಂದಿನಿಂದ 6 ರಿಂದ 8ನೇ ತರಗತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಲಿವೆ.

ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಕಡ್ಡಾಯ ಮಾಡಲಾಗಿದೆ.

ಬೆಂಗಳೂರು, ಕೇರಳದ ಗಡಿಯಲ್ಲಿ ಶಾಲೆಗಳ ಆರಂಭ ಇಲ್ಲ :

ಕೊರೊನಾ ಹೆಚ್ಚಿರುವ ಬೆಂಗಳೂರು ಮತ್ತು ಕೇರಳ ಗಡಿ ಪ್ರದೇಶ ಶಾಲೆಗಳ ಆರಂಭ ಇಲ್ಲ.

ಈ ಪ್ರದೇಶಗಳಲ್ಲಿ 6, 7ನೇ ತರಗತಿಗೆ ವಿದ್ಯಾಗಮದ ಮೂಲಕವೇ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ, 8ನೇ ಕ್ಲಾಸ್​ಗೆ ಮಾತ್ರ ಪೂರ್ಣಾವಧಿ ತರಗತಿಗಳು ನಡೆಯಲಿವೆ.

Copyright © All rights reserved Newsnap | Newsever by AF themes.
error: Content is protected !!