ಸೋಮವಾರದಿಂದ ವಾರ ಪೂರ್ತಿ ಲಾಕ್ ಡೌನ್ ಗೆ ಸರ್ಕಾರದ ಚಿಂತನೆ : ಏಪ್ರಿಲ್ 26 ರಂದು ಸಂಪುಟ ಸಭೆ

Team Newsnap
1 Min Read

ವೀಕೆಂಡ್ ಕಫ್ಯೂ೯ ಯಶಸ್ವಿಯಾದ ಬೆನ್ನಲ್ಲೇ ಸೋಮವಾರದಿಂದ ವಾರಪೂರ್ತಿ ಕಫ್ಯೂ೯ ( ಲಾಕ್ ಡೌನ್ ) ವಿಸ್ತರಣೆ ಮಾಡುವ ಬಗ್ಗೆ ಗಂಭೀರ ಚಿಂತನೆಗಳು ಆರಂಭವಾಗಿದೆ.

ಈ ಸಂಬಂಧ ರಾಜ್ಯದ ಮುಖ್ಯ
ಕಾರ್ಯದರ್ಶಿ ರವಿಕುಮಾರ್ ಕೂಡ ಮಹತ್ವದ ಸುಳಿವು ನೀಡಿದ್ದಾರೆ. ಅಲ್ಲದೆ ಆರೋಗ್ಯ ಸಚಿವ ಡಾ. ಸುಧಾಕರ್ ಕೂಡ ವಾರ ಪೂರ್ತಿ ಕಫ್ಯೂ೯ ವಿಸ್ತರಣೆಯಿಂದ ಕೊರೋನಾ ಹೊಡೆತವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಗೆ ಎಲ್ಲಾ ಸಚಿವರು ಕಡ್ಡಾಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹೇಳುವಂತೆ ಸಿಎಂ‌ ಸೂಚಿಸಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.

ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಹತ್ವದ ಸಭೆಯಲ್ಲಿ ‌ಪ್ರಮುಖವಾಗಿ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಮುಖ ನಿರ್ಧಾರಗಳು ಯಾವವು ? :

  • ಸೋಮವಾರ ದಿಂದ ವಾರಪೂರ್ತಿ ಕಫ್ಯೂ ೯ ವಿಸ್ತರಣೆ ಮಾಡುವುದು
  • ರಾಜ್ಯದಲ್ಲೂ ಉಚಿತ ಲಸಿಕೆ ನೀಡುವುದು
  • ಕೊರೋನಾ ನಿಯಂತ್ರಣಕ್ಕೆ ಅಗತ್ಯ ವಾದ ಔಷಧಿ ಇತ್ಯಾದಿ ಸಾಮಗ್ರಿಗಳನ್ನು ಖರೀದಿಸಲು ಹಣಕಾಸು ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು.‌
Share This Article
Leave a comment