ಡಿಸೆಂಬರ್ 30 ರಿಂದ ಜ. 2 ರ ತನಕ ಹೊಸ ವರ್ಷಾಚರಣೆಗೆ ಹೊಸ ರೂಲ್ಸ್

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಕಳೆದ ವರ್ಷದಂತೆಯೇ ನೂತನ ವರ್ಷದ ಆಚರಣೆಗೆ ಈ ಬಾರಿಯೂ ಬ್ರೇಕ್‌ ಹಾಕಲಾಗಿದೆ.

ಕ್ಷಣಕ್ಷಣಕ್ಕೂ ಕರೊನಾ ಜತೆ ಒಮಿಕ್ರಾನ್‌ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮ ಮಾಡಲಾಗಿದೆ

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವೊಂದು ಮಾಹಿತಿ ನೀಡಿದ್ದಾರೆ.

ತಜ್ಞರ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ನಂತರ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಡಿಸೆಂಬರ್‌ 30ರಿಂದ ಜನವರಿ 2ರ ವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ.

ರೂಲ್ಸ್ ನಲ್ಲಿ ಏನಿದೆ ?


1) ಬೆಂಗಳೂರಿನ ಎಂಜಿರಸ್ತೆ ಮತ್ತು ಬ್ರಿಗೆಡ್‌ ರಸ್ತೆ. ಆದರೆ ಈ ಬಾರಿಯೂ ಕಳೆದ ವರ್ಷದಂತೆ ಸಾಮೂಹಿಕವಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.

2) ರಾಜ್ಯದ ಯಾವುದೇ ಭಾಗಗಳಲ್ಲಿ ಹೊಸ ವರ್ಷಕ್ಕೆಂದು ಜನರು ಗುಂಪುಗೂಡುವಂತಿಲ್ಲ.

3) ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವಂತಿಲ್ಲ.
ಡಿಸ್ಕೋ ಜಾಕಿ (ಡಿಜೆ), ಇತ್ಯಾದಿ ಅಬ್ಬರದ ಸಂಗೀತಗಳಿಗೆ ನಿಷೇಧ ಹೇರಲಾಗಿದೆ.

4)ರೆಸ್ಟೋರೆಂಟ್‌, ಕ್ಲಬ್‌ಗಳಲ್ಲಿ ಇರುವ ಕೆಪ್ಯಾಸಿಟಿಗಿಂತ ಶೇ.50ರಷ್ಟು ಮಾತ್ರ ಜನರು ಇರಲು ಅವಕಾಶ ಕಲ್ಪಿಸಲಾಗಿದೆ.ಶೇ.50ಕ್ಕಿಂತ ಹೆಚ್ಚು ಜನರು ಇವುಗಳಲ್ಲಿ ಸೇರುವಂತಿಲ್ಲ

5) ಅ‍ಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಸಾಮೂಹಿಕವಾಗಿ ಪಾರ್ಟಿ ಮಾಡುವಂತಿಲ್ಲ, ಡಿಸ್ಕೋ ಜಾಕಿ ಇತ್ಯಾದಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವುಗಳ ಜವಾಬ್ದಾರಿಯನ್ನು ಆಯಾ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಡಿಕೊಳ್ಳಬೇಕು.

6) ಡಿಸೆಂಬರ್‌ 30ರಿಂದ ಜನವರಿ 2ನೇ ತಾರೀಖಿನವರೆಗೆ ಈ ನಿಷೇಧ ಚಾಲ್ತಿಯಲ್ಲಿ ಇರುತ್ತದೆ. ಆದರೆ 25ರಂದು ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಅವುಗಳಿಗೂ ಕೆಲವೊಂದು ನಿಯಮ ಮಾಡಲಾಗಿದೆ. ಕ್ರಿಸ್‌ಮಸ್‌ ಯಾವುದೇ ಬಹಿರಂಗ ಪಾರ್ಟಿ ಮಾಡುವಂತಿಲ್ಲ.

7) ಕ್ರಿಸ್‌ಮಸ್‌ ಸಂದರ್ಭದಲ್ಲಿ ಆಂತರಿಕವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ, ಸೆನಿಟೈಸರ್‌ ಎಲ್ಲವನ್ನೂ ಕಾಪಾಡಬೇಕು. ಕ್ಲಬ್‌ಗೆ ಬರುವವರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಅಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ಮಾಡಿಸಬೇಕು.

Share This Article
Leave a comment