ಟೆನ್ನಿಸ್ ದಿಗ್ಗಜ ಸ್ಪೇನ್ನ ರಾಫೆಲ್ ನಡಾಲ್ ಮತ್ತೊಂದು ಗ್ರ್ಯಾನ್ಸ್ಲಾಮ್ ಕಿರೀಟ ತೊಟ್ಟಿದ್ದಾರೆ. 22ನೇ ಗ್ಯಾನ್ಸ್ಲಾಮ್ ಗೆದ್ದು ಚರಿತ್ರೆ ಸೃಷ್ಟಿಸಿ 14ನೇ ಫ್ರೆಂಚ್ ಓಪನ್ ಟೈಟಲ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
2022ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಗೆದ್ದ ರಾಫೆಲ್ ನಡಾಲ್, 6-3, 6-3, 6-0 ನೇರ ಸೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿದರು.
ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದಿದ್ದ ಕಾಸ್ಪರ್ ರೂಡ್ ಸೋತು ನಿರಾಸೆ ಅನುಭವಿಸಿದರು. ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಟ ಆರಂಭದಿಂದಲೂ ನಡಾಲ್ ಮೇಲುಗೈ ಸಾಧಿಸಿದರು. ಇದನ್ನು ಓದಿ : ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿ: ಸ್ಥಳಾಂತರ
ಮೊದಲ ಸೆಟ್ನಲ್ಲಿ ಹೀನಾಯ ಹಿನ್ನಡೆ ಅನುಭವಿಸಿದ್ದ ರೂಡ್, 2ನೇ ಸೆಟ್ನಲ್ಲಿ ಕೊಂಚ ಹೋರಾಟ ನಡೆಸಿದರು. ಕೊನೆಗೆ ಆ ಸೆಟ್ ಕೂಡ ನಡಾಲ್ ಪಾಲಾಯಿತು.
ಇನ್ನು ಮೂರನೇ ಸೆಟ್ನಲ್ಲಿ ಕಾಸ್ಪರ್ ರೂಡ್, ಯಾವುದೇ ಹಂತದಲ್ಲೂ ಪ್ರತಿರೋಧ ನೀಡಲೇ ಇಲ್ಲ. 22ನೇ ಗ್ರ್ಯಾನ್ಸ್ಲಾಮ್ಗೆ ಮುತ್ತಿಕ್ಕಿರುವ ನಡಾಲ್, ಹೆಚ್ಚು ಗ್ರ್ಯಾನ್ಸ್ಲಾಮ್ ಗೆದ್ದ ಟೆನ್ನಿಸ್ ಕಿಂಗ್ ಎನಿಸಿಕೊಂಡಿದ್ದಾರೆ. ರೋಜರ್ ಫೆಡರರ್ ಮತ್ತು ನೋವಾಕ್ ಜೋಕೋವಿಚ್ ತಲಾ 20 ಗ್ರ್ಯಾನ್ಸ್ಲಾಮ್ ಗೆದ್ದು 2ನೇ ಸ್ಥಾನದಲ್ಲಿದ್ದಾರೆ.
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ