Categories: Main News

ಆಸ್ಪತ್ರೆಗಳಿಗೆ ಎಂಇಐಎಲ್‌ನಿoದ ಉಚಿತ ಆಕ್ಸಿಜನ್ ಸರಬರಾಜು

  • ವಿವಿಧ ಆಸ್ಪತ್ರೆಗಳಿಗೆ ಎಂಇಐಎಲ್‌ನಿಂದ ಪ್ರತಿ ನಿತ್ಯ 500ರಿಂದ 600 ಆಕ್ಸಿಜನ್ ಸಿಲಿಂಡರ್ ಉಚಿತ ರವಾನೆ
  • 35 ಲಕ್ಷ ಲೀಟರ್‌ನಷ್ಟು ಪ್ರಾಣವಾಯು ಸೇವೆ
  • ಡಿಆರ್‌ಡಿಓ ಸಹಯೋಗದಲ್ಲಿ ಎಂಇಐಎಲ್‌ನಿAದ 40 ಆಕ್ಷಿಜನ್ ಉತ್ಪತ್ತಿ ಕೇಂದ್ರಗಳ ಸೃಷ್ಟಿ
  • ಉಚಿತ ಸೇವೆಗಾಗಿ ಸ್ಪೇನ್‌ನಿಂದ ಕ್ರಯೋಜೆನಿಕ್ ಟ್ಯಾಂಕ್‌ಗಳ ಆಮದಿಗೂ ಚಿಂತನೆ

ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಎರಡನೇ ಅಲೆಯಿಂದ ಉದ್ಭವಿಸಿರುವ ಆಕ್ಸಿಜನ್ ಕೊರತೆ ನೀಗಿಸಲು ಅಮೂಲ್ಯವಾದ ಪ್ರಾಣಾವಾಯುವನ್ನು ಉಚಿತವಾಗಿ ಒದಗಿಸಲು ಮೆಘಾ ಇಂಜಿನಿಯರಿoಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ., ಮುಂದಾಗಿದೆ.

ಆರಂಭಿಕ ಹಂತದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಈ ಕಾರ್ಯ ಆರಂಭಿಸಿರುವ ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಎಂಇಐಎಲ್, ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಅಗತ್ಯಕ್ಕೆ ಪ್ರತಿ ನಿತ್ಯ 500 ರಿಂದ 600 ಸಿಲಿಂಡರ್‌ಗಳಷ್ಟು ಆಕ್ಸಿಜನ್ ಉಚಿತವಾಗಿ ಸರಬರಾಜು ಮಾಡಲು ಸಿದ್ಧತೆ ನಡೆಸಿದೆ.

ಡಿಆರ್‌ಡಿಓ ಸಹಕಾರದಲ್ಲಿ ಆಕ್ಸಿಜನ್ ಘಟಕಗಳ ಸ್ಥಾಪನೆ:

ಪ್ರಸ್ತುತ ಆಕ್ಸಿಜನ್ ಸರಬರಾಜಿನ ಜತೆಗೆ ಎಂಇಐಎಲ್ ದೇಶದ ಅತ್ಯುನ್ನತ ಸಂಸ್ಥೆ ಡಿಆರ್‌ಡಿಓ ತಾಂತ್ರಿಕ ಸಹಕಾರದೊಂದಿಗೆ 30ರಿಂದ 40 ಆಕ್ಸಿಜನ್ ಉತ್ಪಾದನಾ ಘಟಕವನ್ನು ಆರಂಭಿಸಲೂ ಮುಂದಾಗಿದೆ.

ಯುದ್ಧ ವಿಮಾನಗಳಲ್ಲಿ ಬಳಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಈ ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 150 ರಿಂದ 1000 ಲೀಟರ್‌ಗಳಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ್ದಾಗಿರಲಿವೆ. ಈ ಸಂಬಂಧ ಈಗಾಗಲೇ ಮೆಘಾ ಇಂಜಿನಿಯರಿಂಗ್ ಡಿಆರ್‌ಡಿಓ ಜತೆ ಮಾತುಕತೆ ನಡೆಸಿದ್ದು, ಡಿಆರ್‌ಡಿಓ ನಿರ್ದೇಶಕ ಬಿ.ಎಸ್. ರಾವತ್ ಈ ಕಾರ್ಯ ಸಹಯೋಗಕ್ಕೆ ತಮ್ಮ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ರಾಘವೇಂದ್ರ ರಾವ್ ಅವರನ್ನು ನೇಮಿಸಿದೆ.

ಪ್ರಸ್ತುತ ಎಂಇಐಎಲ್ ಪ್ರತಿನಿತ್ಯ 30 ಟನ್‌ಗಳಷ್ಟು ಕ್ರಯೋಜೆನಿಕ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ನಂತರ ಇದನ್ನು ವೈದ್ಯಕೀಯ ಬಳಕೆಗೆ ಅನುವಾಗುವಂತೆ ಪರಿವರ್ತಿಸಿ ಸರಬರಾಜು ಮಾಡಲಿದೆ. ಮೇ 13ರ ವೇಳೆಗೆ ಭದ್ರಾಚಲಂನಲ್ಲಿ ಇಂತಹ ಘಟಕವೊಂದು ಕಾರ್ಯಾರಂಭಿಸಲಿದೆ.

ಮುಂದಿನ ದಿನಗಳಲ್ಲಿ ಎಂಇಐಎಲ್ ರಾಜ್ಯಗಳ ಅಗತ್ಯತೆ ತಕ್ಕಂತೆ ಸ್ಪೇನ್‌ನಿಂದ 2ರಿಂದ 3 ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಆಮದು ಮಾಡಿಕೊಂಡು ಇನ್ನಷ್ಟು ಪ್ರಾಣವಾಯು ಉತ್ಪಾದನೆಗೆ ಚಿಂತನೆ ನಡೆಸಿದೆ.

ಪ್ರಸ್ತುತ ಎಂಇಐಎಲ್‌ನ ಆಕ್ಸಿಜನ್ ‘ಬಿ’ ಮಾದರಿಯ ವೈದ್ಯಕೀಯ ಬಳಕೆಯದಾಗಿದ್ದು, ಪ್ರತಿ ಸಿಲಿಂಡರ್ 7000 ಲೀಟರ್ ಸಾಮರ್ಥ್ಯದಾಗಿರಲಿದೆ ಮತ್ತು ಒಟ್ಟಾರೆ 35 ಲಕ್ಷ ಲೀಟರ್ ಆಕ್ಸಿಜನ್ ಸರಬರಾಜಾಗಲಿದೆ.

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024