January 6, 2025

Newsnap Kannada

The World at your finger tips!

kamala h

ಗೃಹಿಣಿ ಯರಿಗೂ ಸಂಬಳ – ಉಚಿತ ಇಂಟರ್ ನೆಟ್ ಸೌಲಭ್ಯ: ಕಮಲ್ ಹಾಸನ್

Spread the love

ತಮಿಳುನಾಡಿನಲ್ಲಿ ಮನೆಕೆಲಸ ಮಾಡಿಕೊಂಡಿರುವ ಗೃಹಿಣಿ ಯರಿಗೂ ಬಂಪರ್ ಆಫರ್ ನೀಡಿದ್ದಾರೆ ರಾಜಕಾರಣಿ ಕಂ ನಟ ಕಮಲ್ ಹಾಸನ್

2021 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯ್ಯಮ್(ಎಂಎನ್‍ಎಂ) ಪಕ್ಷ ಅಧಿಕಾರಕ್ಕೆ ಬಂದರೆ ಗೃಹಿಣಿಯರ ಮನೆಗೆಲಸಕ್ಕೂ ಸಂಬಳ ನೀಡುವುದಾಗಿ ನಟ ಕಮಲ್ ಹಾಸನ್ ಘೊಷಿಸಿದರು.

ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 7 ಅಂಶಗಳುಳ್ಳ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಒಂದು ವೇಳೆ 2021ರ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದರೆ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೂ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಮಲ್ ಪಕ್ಷದ ಪ್ರಮುಖ ಘೋಷಣೆ:

  • ಮನೆಯನ್ನು ನಿಭಾಯಿಸುವ ಗೃಹಿಣಿಯರ ಗೌರವವನ್ನು ಹೆಚ್ಚಿಸಲು ಅವರಿಗೆ ಈ ವೇತನ ನೀಡಲಾಗುವುದು.
  • ಮನೆಯ ಎಲ್ಲಾ ಮಂದಿಗೆ ಕಂಪ್ಯೂಟರ್ ಜೊತೆ ಅತಿ ವೇಗದ ಇಂಟರ್ನೆಟ್ ಆಶ್ವಾಸನೆ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.
  • ಬಡತನ ರೇಖೆಗಿಂತ ಕೆಳಗಿನವರ ಆರ್ಥಿಕ ಉನ್ನತೀಕರಣಕ್ಕೆ ತಮ್ಮ ಪಕ್ಷ ಕ್ರಮ ಕೈಗೊಳ್ಳಲಿದೆ.
  • ಗ್ರಾಮಗಳಲ್ಲಿ ರೈತರಿಗೆ ವಿಶ್ವದರ್ಜೆಯ ಶೀತಲೀಕರಣ ವ್ಯವಸ್ಥೆ
  • ಸಾವಯವ ಕೃಷಿಗೆ ಒತ್ತು ನೀಡುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.
Copyright © All rights reserved Newsnap | Newsever by AF themes.
error: Content is protected !!