ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪಿ ಈಗ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುತ್ತೇನೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಗೋವಿಂದರಾಜು ಎಂಬಾತನನ್ನು ವಿಜಯನಗರ ಎಸಿಪಿ ಚಂದನ್ ಕುಮಾರ್ ಅವರ ತಂಡ ಬಂಧಿಸಿದೆ.
ವಿವಿಧ ಪರೀಕ್ಷೆಗಳಿಗೆ ಪಾಸ್ ಗ್ಯಾರಂಟಿ ಹೆಸರಿನಲ್ಲಿ ವಂಚನೆ
ಆರೋಪಿ ಗೋವಿಂದರಾಜು, ಕೆಎಎಸ್, ಪಿಡಿಓ, ಪಿಎಸ್‌ಐ, ಎಫ್‌ಡಿಎ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಾಸ್ ಮಾಡಿಸುತ್ತೇನೆ ಎಂದು ಹೇಳಿ, ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದನು.
ಮೋಸದ ಮಾದರಿ
ಈ ವಂಚಕ, ಅಭ್ಯರ್ಥಿಗಳಿಗೆ “ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಬರೆದು ಉಳಿದವು ಖಾಲಿ ಬಿಟ್ಟು ಬರುವಂತೆ” ಸೂಚಿಸುತ್ತಿದ್ದ. ಪರೀಕ್ಷೆಯಲ್ಲಿ ಪಾಸ್ ಆಗುತ್ತೇವೆ ಎಂಬ ನಂಬಿಕೆ ಹೊಂದಿದ ಅಭ್ಯರ್ಥಿಗಳು ಇತ್ತೀಚೆಗೆ ವಂಚನೆ ಕುರಿತು ಅರಿತು ಪೋಲೀಸರಿಗೆ ದೂರು ನೀಡಿದ್ದಾರೆ.ಇದನ್ನು ಓದಿ –ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
ಆರೋಪಿ ಬಗೆಗಿನ ಹಿನ್ನೆಲೆ
ಗೋವಿಂದರಾಜು ರೇಲ್ವೇ ಉದ್ಯೋಗಿಯಾಗಿದ್ದು, 2019ರಲ್ಲಿ ಸಿಸಿಬಿ ಪೋಲೀಸರು ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದರು. ತಾನು ಹಿಂದೆ ಮಾಡಿಕೊಂಡ ಕೃತ್ಯಗಳನ್ನು ಮುಂದುವರಿಸಿಕೊಂಡು ಮತ್ತೆ ಅಭ್ಯರ್ಥಿಗಳನ್ನು ವಂಚಿಸುತ್ತಿದ್ದನು.
More Stories
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ