April 15, 2025

Newsnap Kannada

The World at your finger tips!

cyber , crime , helpline

ಸಹಾಯವಾಣಿ ಹೆಸರಲ್ಲಿ ವಂಚನೆ:ಮಹಿಳೆಯಿಂದ ₹2 ಲಕ್ಷ ವಂಚಿಸಿದ ಸೈಬರ್ ಖದೀಮರು

Spread the love

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಹಾಯವಾಣಿ (ಹೆಲ್ಪ್‌ಲೈನ್) ಹೆಸರಲ್ಲಿ ಕರೆ ಮಾಡಿ ಮಹಿಳೆಯನ್ನು ₹2 ಲಕ್ಷ ವಂಚಿಸಿದ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಂಚಕರು ಬ್ಯಾಂಕ್ ಪ್ರತಿನಿಧಿಗಳಂತೆ ಮಾತನಾಡಿ, 58 ವರ್ಷದ ಮಹಿಳೆಗೆ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿದ್ದು, ನಿಮ್ಮ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾವಣೆ ಆಗುತ್ತಿದೆ ಎಂದು ಭಯ ಹುಟ್ಟಿಸಿದ್ದಾರೆ. ನಂತರ, ನೀವು ಹಣ ವರ್ಗಾಯಿಸಿದರೆ “3” ಒತ್ತಿ ಇಲ್ಲವಾದರೆ “1” ಒತ್ತಿ ಎಂದು ತಿಳಿಸಿದ್ದಾನೆ.

ಗಾಬರಿಗೊಂಡ ಮಹಿಳೆ “1” ಒತ್ತಿದ ತಕ್ಷಣ ವಂಚಕ ಕರೆ ಕಡಿತಗೊಳಿಸಿ, ನಿಮ್ಮ ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸಿ ಎಂದು ಹೇಳಿದರು.

ನಂತರ ಮಹಿಳೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಆಕೆಯ ಖಾತೆಯಿಂದ ₹2 ಲಕ್ಷ ಡ್ರಾ ಆಗಿರುವುದು ಗೊತ್ತಾಯಿತು. ತಕ್ಷಣವೇ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930) ಗೆ ಕರೆ ಮಾಡಿ ದೂರು ನೀಡಿದ್ದು, ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ -ಮಂಡ್ಯ: ವಿಸಿ ನಾಲೆಗೆ ಕಾರು ಬಿದ್ದ ದುರಂತ – ಮತ್ತೊಬ್ಬನ ಶವ ಪತ್ತೆ, ಸಾವಿನ ಸಂಖ್ಯೆ ಮೂವರಿಗೆ ಏರಿಕೆ

ಜನರಿಗೂ ಎಚ್ಚರಿಕೆ: ಈ ರೀತಿಯ ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು. ಬ್ಯಾಂಕ್ ಯಾವುದೇ ಸಂದರ್ಭದಲ್ಲೂ ಸಹಾಯವಾಣಿ ಮೂಲಕ ಪಿನ್ ಅಥವಾ ಖಾತೆ ವಿವರ ಕೇಳುವುದಿಲ್ಲ. ಯಾರಿಗಾದರೂ ಶಂಕಾಸ್ಪದ ಕರೆ ಬಂದರೆ ತಕ್ಷಣವೇ ಪೊಲೀಸರನ್ನು ಅಥವಾ ಸೈಬರ್ ಕ್ರೈಮ್ ಸಹಾಯವಾಣಿಯನ್ನು ಸಂಪರ್ಕಿಸುವುದು ಸೂಕ್ತ.

Copyright © All rights reserved Newsnap | Newsever by AF themes.
error: Content is protected !!