ವಂಚನೆಯಲ್ಲಿ ತೊಡಗಿರುವ ಅಪರಿಚಿತ ವ್ಯಕ್ತಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮಳವಳ್ಳಿಯ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಭರ್ಜರಿ ಬಹುಮಾನಗಳ ಘೋಷಣೆ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಸ್ಪರ್ಧೆಗೆ ಸಂಬಂಧಿಸಿದಂತೆ, ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ₹4 ಲಕ್ಷ, ತೃತೀಯ ₹3 ಲಕ್ಷ, ನಾಲ್ಕನೇ ₹2 ಲಕ್ಷ, ಮತ್ತು ಐದನೇ ಬಹುಮಾನ ₹1 ಲಕ್ಷ ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ₹10,000 ಪ್ರವೇಶ ಶುಲ್ಕ, ಮತ್ತು ಮುಂಗಡವಾಗಿ ₹3500 ಪಾವತಿಸಲು ಸೂಚನೆ ನೀಡಲಾಗಿತ್ತು. ಈ ಸ್ಪರ್ಧೆ ನವೆಂಬರ್ 20ರಂದು ಮಳವಳ್ಳಿಯಲ್ಲಿ ನಡೆಯಲಿದೆ ಎಂಬ ನಕಲಿ ಮಾಹಿತಿಯೊಂದಿಗೆ ಜನರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.
ಅಪರಿಚಿತ ವ್ಯಕ್ತಿ ಅಪ್ಪು ಹೆಸರಿನಲ್ಲಿ ಜನರನ್ನು ಮೋಸಮಾಡುತ್ತಿದ್ದಾನೆ ಎಂಬ ಆಕ್ಷೇಪವಿದೆ.ದೋಸೆ ಪ್ರಿಯರಿಗೆ ಸಿಹಿ ಸುದ್ದಿ: ಶೀಘ್ರವೇ ಕೆಎಂಎಫ್ ನಿಂದ ‘ನಂದಿನಿ ದೋಸೆ ಹಿಟ್ಟು’ ಮಾರುಕಟ್ಟೆಗೆ
ಈ ಘಟನೆಗೆ ಸಂಬಂಧಿಸಿ ಮಳವಳ್ಳಿಯ ಪೊಲೀಸರಿಗೆ ದೂರು ನೀಡಿದ್ದು, ಜನರನ್ನು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು