July 30, 2025

Newsnap Kannada

The World at your finger tips!

cyber , crime , helpline

ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಗ್ಯಾಂಗ್ ಬಂಧನ

Spread the love

ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಚೆನ್ನಾಗಿರುವ ಯುವತಿಯರ ಫೋಟೋಗಳನ್ನು ಸೇವ್ ಮಾಡಿಕೊಂಡು ಹೈಫೈ ವೇಶ್ಯಾವಾಟಿಕೆಗೆ ಪ್ರಸಿದ್ಧವಾದ ಲೊಕ್ಯಾಂಟೊ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಬೆಂಗಳೂರಿನ ಸದ್ದುಗಂಟೆ ಪೊಲಿಸರು ಬಂಧಿಸಿದ್ದಾರೆ.

ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಅವರನ್ನು ಬಂಧಿಸಿದ್ದಾರೆ.ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ:ಇಬ್ಬರು ಯುವಕರು ಸಾವು

ಯುವತಿಯರ ಫೋಟೋವನ್ನು ನೋಡಿದ ಕೆಲ ಗ್ರಾಹಕರು, ಆ ಅಕೌಂಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಅಡ್ವಾನ್ಸ್ ಹಣವಾಗಿ ಇಂತಿಷ್ಟು ಹಣ ಅಂತಾ ಹಾಕಿಸಿಕೊಳ್ತಿದ್ದ ಆರೋಪಿಗಳು, ನಂತರ ಆ ಅಕೌಂಟ್ ನ ಬ್ಲಾಕ್ ಮಾಡಿ ಬಿಡುತ್ತಿದ್ದರು.

ಮತ್ತೆ ಅದೇ ಹುಡುಗಿಯರ ಫೋಟೋಗಳನ್ನು ಬೇರೆ ಗ್ರಾಹಕರಿಗೆ ಕಳಸುಹಿಸಿ ಇದೇ ರೀತಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!