ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಐಶ್ವರ್ಯ ಗೌಡ ವಿರುದ್ಧ ಆರ್‌ಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಚಿನ್ನಾಭರಣ ಖರೀದಿಸಿ ವಂಚನೆ
ಐಶ್ವರ್ಯ ಗೌಡ, ಚಂದ್ರ ಲೇಔಟ್ ನಿವಾಸಿ ಹಾಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಮಾಲಕಿ ವನಿತಾ ಐತಾಳ್ ಅವರಿಗೆ ತಾನು ಡಿ.ಕೆ. ಸುರೇಶ್ ತಂಗಿ ಹಾಗೂ ದೊಡ್ಡ ವ್ಯಾಪಾರಿ ಮಹಿಳೆ ಎಂದು ಪರಿಚಯಿಸಿಕೊಂಡು, 8.41 ಕೋಟಿ ಮೌಲ್ಯದ ಚಿನ್ನವನ್ನು 2023ರ ಅಕ್ಟೋಬರ್‌ನಿಂದ 2024ರ ಏಪ್ರಿಲ್ ವರೆಗೆ ಹಂತ ಹಂತವಾಗಿ ಪಡೆದುಕೊಂಡಿದ್ದಾರೆ.
ಹಣ ಕೇಳಿದಾಗ ಬೆದರಿಕೆ
ಚಿನ್ನದ ಹಣ ಕೇಳಿದಾಗ ಐಶ್ವರ್ಯ ಗೌಡ, ಡಿ.ಕೆ. ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದು, ಮತ್ತೊಮ್ಮೆ ಧರ್ಮೇಂದ್ರ ಎಂಬುವ ವ್ಯಕ್ತಿಯ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುನಲ್ಲಿ ಉಲ್ಲೇಖವಾಗಿದೆ.
ರಾಜಕೀಯ ಸಂಪರ್ಕವನ್ನ ಪ್ರಸ್ತಾಪಿಸಿ ವಂಚನೆ
ಐಶ್ವರ್ಯ ಗೌಡ ಅವರ ಪತಿ ಹರೀಶ್ ಕೆ.ಎನ್ ಕೂಡ ಬೆದರಿಕೆ ಹಾಕಿದ್ದು, ರಾಜಕೀಯ ಪ್ರಮುಖರ ಸಂಪರ್ಕವಿದೆ ಎಂದು ಐಶ್ವರ್ಯ ನಂಬಿಸಿದ್ದಾರೆ. ಈ ಮೂಲಕ, ವನಿತಾ ಐತಾಳ್ ಅವರಿಗೆ ವ್ಯಾಪಾರ ಒಡಂಬಡಿಕೆಗಳ ಭರವಸೆ ನೀಡಿ ವಂಚನೆ ಮಾಡಿದ್ದಾರೆ.ಇದನ್ನು ಓದಿ –ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
ಜನಪ್ರಿಯ ವ್ಯಕ್ತಿಗಳ ಹೆಸರನ್ನು ದುರುಪಯೋಗ ಮಾಡಿಕೊಂಡು ವಂಚನೆ ಮಾಡಿದ ಪ್ರಕರಣಗಳು ಅಸಹಜ ಗಾತ್ರಕ್ಕೆ ಏರಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
More Stories
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ