February 20, 2026

Newsnap Kannada

The World at your finger tips!

sucide

ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Spread the love

ಬಾಗಲಕೋಟೆ ಬಳಗಿ ತಾಲೂಕಿನ ಸುನಗ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಜರುಗಿದೆ.

ಮಂಗಳೂರಿನ ಮಂಗಳಾದೇವಿಯ ಸಮೀಪದ ಮಾಗ೯ನ್ ಗೇಟ್ ಸಮೀಪದ ಮನೆಯಲ್ಲಿ ಕುಟುಂಬದ. ಮುಖ್ಯಸ್ಥ ನಾಗೇಶ್ ಶಿರಗುಪ್ಪಿ( 30) ವಿಜಯಲಕ್ಷ್ಮಿ( 28) ಮಕ್ಕಳಾದ ಸಪ್ನಾ (8)ಹಾಗೂ ಸಮಥ್೯ (4) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡರೆ ಉಳಿದ ಮೂವರು ವಿಷ ಸೇವಿಸಿ ಮಲಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ

ಬಾಗಲಕೋಟೆ ಮೂಲದವರಾದ ನಾಗೇಶ್ ದಂಪತಿಗಳ ಹಾಗೂ ಮಕ್ಕಳ ಸಾವಿಗೆ ಕಾರಣಗಳು ತಿಳಿದು ಬಂದಿಲ್ಲ, ನಾಗೇಶ್ ಕಾರು ಚಾಲಕನಾಗಿ ಹಾಗೂ ವಿಜಯಲಕ್ಷ್ಮಿ ಖಾಸಗಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.

ಮಂಗಳೂರು ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!