January 9, 2025

Newsnap Kannada

The World at your finger tips!

beach,dead,students

Four dead bodies found at Kumata taluk #thenewsnap #beach #shocking_news #bengaluru #latest_news #mandya #mysuru #dead

ಕುಮಟಾ ತಾಲೂಕಿನ ಬಾಡದ ಬಳಿ ನಾಲ್ವರು ಸಮುದ್ರಪಾಲು:ಇಬ್ಬರ ಮೃತದೇಹ ಪತ್ತೆ

Spread the love

ಸಮುದ್ರಕ್ಕಿಳಿದ ನಾಲ್ವರು ಪ್ರವಾಸಿಗರು, ಅಲೆಗಳ ಸೆಳೆತಕ್ಕೆ ಕೊಚ್ಚಿಕೊಂಡು ಘಟನೆ ಕುಮುಟ ತಾಲೂಕಿನ ಬಾಡ ಜರುಗಿದೆ ಇಬ್ಬರ ಮೃತದೇಹಗಳು ಸಿಕ್ಕಿವೆ ಇನ್ನಿಬ್ಬರಿಗೆ ಹುಡುಕಾಟ ಮುಂದುವರಿದಿದೆ.

ಮೃತರನ್ನು ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶ್ರೀ (27) ಎಂದು ಗುರುತಿಸಲಾಗಿದೆ. ರಾಜಾಜಿನಗರದ ತೇಜಸ್.ಡಿ (22) ಹಾಗೂ ಕನಕಪುರ ರಸ್ತೆಯ ಕಿರಣಕುಮಾರ (27) ಎಂಬುವವರಿಗೆ ಶೋಧ ಕಾರ್ಯ ನಡೆದಿದೆ ಇದನ್ನು ಓದಿ – ಹಣಕಾಸು ಅಕ್ರಮ : ಮಂತ್ರಿ ಗ್ರೂಪ್ ಎಂಡಿ ED ವಶಕ್ಕೆ 

ಬೆಂಗಳೂರಿನ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು.ಶನಿವಾರ ಬೆಳಿಗ್ಗೆ ಎರಡು ಬಸ್‌ಗಳಲ್ಲಿ ಸುಮಾರು 85 ಮಂದಿ ಬಾಡದ ಸಿಲ್ವರ್ ಸ್ಯಾಂಡ್ ಬೀಚ್ ರೆಸಾರ್ಟ್‌ಗೆ ಬಂದಿದ್ದರು. ಅವರಲ್ಲಿ ನಾಲ್ವರು ಮಧ್ಯಾಹ್ನ ಊಟದ ಸಮಯದಲ್ಲಿ ಫೋಟೋ ತೆಗೆಯಲು ನೀರಿಗೆ ಇಳಿದಾಗ ಅವಘಡ ನಡೆದಿದೆ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!