ಐಸಿಸ್ ಕಾಶ್ಮೀರದಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಬಿಜೆಪಿ ಸಂಸದ ಗೌತಮ್ ಗಂಭೀರ್ ದೂರು ನೀಡಿದ್ದಾರೆ
ಗೌತಮ್ ಗಂಭೀರ್‌ಗೆ ಬಂದಿರುವ ಬೆದರಿಕೆಯ ಮೇಲ್‍ಗಳ ಕುರಿತು ತನಿಖೆ ನಡೆಸುತ್ತಿದ್ದೇವೆ. ಅಷ್ಟೇ ಅಲ್ಲದೇ ಗಂಭೀರ್ ಮನೆಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ ಎಂದು ಎಂದು ಕೇಂದ್ರ ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ
ನ.23ರಂದು ರಾತ್ರಿ 9:32ರ ವೇಳೆಗೆ ನನ್ನ ಅಧಿಕೃತ ಖಾತೆಗೆ ಐಸಿಸ್ ಕಾಶ್ಮಿರದಿಂದ ಇ-ಮೇಲ್ ಬಂದಿದೆ ಎಂದು ಗೌತಮ್ ಗಂಭೀರ್ ದೂರಿನಲ್ಲಿ ತಿಳಿಸಿದ್ದಾರೆ.
ನಾವು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕೊಲ್ಲಲಿದ್ದೇವೆ ಎಂದು ಮೇಲ್‍ನಲ್ಲಿ ಬರೆಯಲಾಗಿದೆ.
ಕಟ್ಟಾ ರಾಷ್ಟ್ರೀಯವಾದಿಯಾದ 40 ವರ್ಷ ವಯಸ್ಸಿನ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಭಯೋತ್ಪಾದನೆ ನಿಯಂತ್ರಣಗೊಳ್ಳುವವರೆಗೂ ಪಾಕ್‍ನೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ತಿಳಿಸಿದ್ದರು.
More Stories
ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
ಏಕದಿನ ಕ್ರಿಕೆಟ್ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ