January 3, 2025

Newsnap Kannada

The World at your finger tips!

election , politics , JDS

ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಕೊನೆಯ ಆಸೆ ಪೂರೈಸಿದ ಮಾಜಿ ಸಿ ಎಂ ಎಚ್ ಡಿ ಕೆ

Spread the love
  • ಜಯರಾಮು ಕುಟುಂಬ ನೆಮ್ಮದಿಯಾಗಿ ಬದುಕಲು ಸಾಧ್ಯವಾದ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದ ಮಾಜಿ ಸಿಎಂ
  • ಜಯರಾಮು ಕುಟುಂಬಕ್ಕೆ ಪರಿಹಾರದ ಹಣ ನೀಡಿದ ನಿಖಿಲ್ ಕುಮಾರಸ್ವಾಮಿ

ಆಟೋ ಚಾಲಕ ಅಭಿಮಾನಿ ಕೊನೆಯ ಆಸೆ ಪೂರೈಸಿದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ , ಆತನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

k a

ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ನಲ್ಲಿ ಆಸೆ ವ್ಯಕ್ತಪಡಿಸಿದ್ದ ಆಟೋ ಚಾಲಕ ಜಯರಾಮು ಅಂತ್ಯಕ್ರಿಯೆಗೆ ಮಾಜಿ ಸಿಎಂ ಎಚ್ ಡಿಕೆ ಹಾಗೂ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿ ಅಂತಿಮ ದರ್ಶನ ಪಡೆದರು.

ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿ ಗೆ  12 ಗಂಟೆ ಸುಮಾರಿಗೆ
ಆಗಮಿಸಿದ ಕುಮಾರಸ್ವಾಮಿಯವರು  ಅಂತಿಮ ದರ್ಶನ ಪಡೆದರು.

ನೆಮ್ಮದಿಯ ಬದುಕಿಗಾಗಿ ಕುಟುಂಬಕ್ಕೆ ನೆರವು :

ಈ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಜಯರಾಮು ತೀವ್ರ ಅನಾರೋಗ್ಯದಿಂದ ಬಳಲಿದ್ದರು. ಆತನ ಕೊನೆ ಆಸೆಯಂತೆ ಇಂದು ಬಂದಿದ್ದೇನೆ. ಆತನ ಹೆಂಡತಿ ಚಿಕ್ಕವಯಸ್ಸಿನವಳು. ಮಗನಿಗೆ ಬುದ್ಧಿಮಾಂದ್ಯತೆ ಇದೆ. ತಾಯಿ ಇದ್ದಾರೆ. ಅವರ ಕುಟುಂಬಕ್ಕೆ ನೆಮ್ಮದಿಯಿಂದ ಬದುಕಲು ಅಗತ್ಯ ಇರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆ ಕೊಟ್ಟಿದ್ದೇನೆ ಎಂದರು.

ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ ಜಯರಾಮು ಕರೆಗೆ ಓಗೊಟ್ಟು ಮಾಜಿ ಸಿಎಂ ಕುಮಾರಸ್ವಾಮಿ ಧಾವಿಸಿ ಬಂದಿದ್ದರು.

ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಹೆಚ್.ಡಿ.ಕೆ ಹಾಗೂ ನಿಖಿಲ್. ಈ ವೇಳೆವಕುಟುಂಬಸ್ಥರಿಗೆ ನಿಖಿಲ್ ಕುಮಾರಸ್ವಾಮಿ ಒಂದಷ್ಟು ಪರಿಹಾರದ ಹಣ ಕೊಟ್ಟರು.

Copyright © All rights reserved Newsnap | Newsever by AF themes.
error: Content is protected !!