February 21, 2026

Newsnap Kannada

The World at your finger tips!

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಮಾಜಿ ಶಾಸಕನಿಗೆ ಧರ್ಮದೇಟು

Spread the love

9 ನೇ ತರಗತಿ ಓದುತ್ತಿರುವ ಮೊಮ್ಮಗಳ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಜಿ ಶಾಸಕನೊಬ್ಬನಿಗೆ ಬಾಲಕಿಯ ಪೋಷಕರು ಧರ್ಮದೇಟು ಹಾಕಿದ ಘಟನೆ ಉತ್ತರ ಪ್ರದೇಶದ ಚಿರಾಗಾಂವ್ ಎಂಬಲ್ಲಿ ಜರುಗಿದೆ.

ಕಲಿಯುಗದಲ್ಲಿ ನಡೆಯಬಾರದ್ದು ನಡೆಯುತ್ತಿದೆ ಎಂದು ಹಿರಿಯರು ಬಹು ಹಿಂದೆ ಹೇಳಿದ್ದಾರೆ. ಈ ಮಾತಿಗೆ ಸಾಕ್ಷಿ ಯಾಗಿ ಎರಡು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಮಾಜಿ ಶಾಸಕ ಕಂ ಎಂಜನೀಯರಿಂಗ್ ಕಾಲೇಜಿನ ಮಾಲೀಕನೂ ಆದ ಮಾಯಾ ಶಂಕರ್ ಪಾಠಕ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಚಿರಾಗಾಂವ್ ನ ಮಾಜಿ ಬಿಜೆಪಿ ಶಾಸಕ ಮಾಯಾ ಶಂಕರ್ ಪಾಠಕ್
ಎಂಜಿನಿಯರಿಂಗ್‌ ಕಾಲೇಜಿನ ಮಾಲೀಕ ಕೂಡ ಹೌದು. ಈತ 9 ನೇ ತರಗತಿ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂಗತಿ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ.‌ ನಂತರ ಪೋಷಕರು ಬೆಂಬಲಿಗರೊಡನೆ ಪಾಠಕ್ ಇರುವ ಕಾಲೇಜಿಗೆ ಬಂದು ಏನನ್ನೂ ವಿಚಾರಿಸದೇ ಚೆನ್ನಾಗಿ ಧರ್ಮದೇಟು ಹಾಕಿದ್ದಾರೆ.‌ ಕೊನೆಗೆ ಮಾಜಿ ಶಾಸಕ ಪಾಠಕ್ ತನ್ನ ತಪ್ಪಿನ ಬಗ್ಗೆ ಕ್ಷಮೆ ಕೇಳಿದ್ದಾನೆ.

ಲೈಂಗಿಕ ಕಿರುಕುಳ ಅನುಭವಿಸಿದ ಬಾಲಕಿ ಅಥವಾ ಪೋಷಕರು ದೂರು ನೀಡಲಿಲ್ಲ. ಪೊಲೀಸ್ ಠಾಣೆಯವರು ಸ್ವ ಪ್ರೇರಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

error: Content is protected !!