ಬೆಂಗಳೂರು :
ಕಳೆದ 5 ದಿನದ ಹಿಂದೆ ಚಿರತೆಯನ್ನು ಇಂದು ಬೊಮ್ಮನಹಳ್ಳಿಯ ಕೃಷ್ಣಾರೆಡ್ಡಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಈಗ ಸೆರೆ ಸಿಕ್ಕ ಚಿರತೆ ಮೃತಪಟ್ಟಿದೆ ಎನ್ನಲಾಗಿದೆ.
ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಬೀದಿ ನಾಯಿಗಳ ಬೆನ್ನು ಬಿದ್ದಿತ್ತು. ಆದಾದ ಮೇಲೆ ಕೃಷ್ಣಾ ರೆಡ್ಡಿ ಲೇಔಟ್‌ನ ಅಪಾರ್ಟ್‌ಮೆಂಟ್ ಒಳಗೂ ಓಡಾಟ ನಡೆಸಿತ್ತು.
ಸಿಸಿಟಿವಿಯಲ್ಲಿ ಚಿರತೆಯನ್ನು ನೋಡಿದ್ದ ಜನರಿಗೆ ಆತಂಕ ಹೆಚ್ಚಾಗಿತ್ತು. ಕೊನೆಗೆ ಪಾಳು ಬಿದ್ದ ಮನೆ, ಪೊದೆ ಸೇರಿದ್ದ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದ ಆಪರೇಷನ್ ಸಕ್ಸಸ್ ಆಗಿದೆ. ಆದರೆ ಸೆರೆ ಸಿಕ್ಕ ಚಿರತೆ ಸಾವನ್ನಪ್ಪಿದೆ.
ಚಿರತೆ ಆಪರೇಷನ್ ವೇಳೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದ ವೇಳೆ ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನೇ ಪರಚಿ ಹೋಗಿತ್ತು. ಹೀಗಾಗಿ ನುರಿತ ತಜ್ಞರನ್ನು ಕರೆಸಿಕೊಳ್ಳದೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ರಾ?
ಪೊದೆಯಿಂದ ಚಿರತೆ ಬಲೆಗೆ ಬೀಳುತ್ತಿದ್ದಂತೆ ಬನ್ನೇರುಘಟ್ಟದಿಂದ ಆಗಮಿಸಿದ್ದ ಸಿಬ್ಬಂದಿಯೇ ಶೂಟೌಟ್ ಮಾಡಿದ್ದಾರೆ ಎನ್ನಲಾಗಿದೆ. ಅರವಳಿಕೆ ನೀಡುವ ಬದಲು ಏಕ್ ಧಮ್ ಶೂಟ್ ಮಾಡಿರುವ ಆರೋಪ ಕೇಳಿ ಬಂದಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ