January 16, 2025

Newsnap Kannada

The World at your finger tips!

chaitra kotturu

ಮಂಡ್ಯದ ಹುಡುಗನೊಂದಿಗೆ ಬಲವಂತ ಮದುವೆ : ಚೈತ್ರಾ ಕೊಟ್ಟೂರು ವಿರುದ್ದ ಪೋಲಿಸರಿಗೆ ದೂರು

Spread the love

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕೊಟ್ಟೂರು ವಿವಾದಗಳ ಕೇಂದ್ರಕ್ಕೂ ಅಷ್ಟೇ ಖ್ಯಾತಿ. ಈಗ ಆಕೆಯ ಮದುವೆಯೂ ವಿವಾದದ ಸುಳಿಗೆ ಸಿಲುಕಿದೆ.

ಈಗ ಮತ್ತೊಂದು ವಿವಾದವನ್ನು ಆಕೆ ಎಳೆದುಕೊಂಡಿದ್ದಾಳೆ. ಭಾನುವಾರ ಬೆಳಿಗ್ಗೆ ಮದುವೆ ಮಾಡಿಕೊಂಡಿರುವ ಚೈತ್ರಾ ವಿರುದ್ದ ಸಂಜೆ ವೇಳೆಗೆ ಮದುವೆಯಾದ ಮಂಡ್ಯದ ಹುಡುಗ ನಾಗಾರ್ಜುನ, ನಂಗೆ ಈ ಮದುವೆ ಇಷ್ಟವಿಲ್ಲ ಎಂದು ಕೋಲಾರದಲ್ಲಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ದೇವಸ್ಥಾನದಲ್ಲಿ ಮಂಡ್ಯದ ನಾಗಾರ್ಜುನ ಜೊತೆ, ಚೈತ್ರಾ ಕೊಟ್ಟೂರು ಸರಳವಾಗಿ ವಿವಾದ ಆಗಿದ್ದರು.

ಆದರೆ ಇದು ಬಲವಂತ ಹಾಗೂ ಬೆದರಿಕೆಯ ಮದುವೆ ಎಂದು ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ನಿನ್ನೆ ಸಂಜೆ ದೂರು ನೀಡಲಾಗಿದೆ.

ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೊಟ್ಟೂರು, ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ಭಾನುವಾರ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ಅವರನ್ನು ಕೂಡಿ ಹಾಕಿ ದೇವಸ್ಥಾನದಲ್ಲಿ ಚೈತ್ರಾ ಕೊಟ್ಟೂರು ಮದುವೆ ಆಗಿದ್ದಾರೆ ಎನ್ನುವುದು ಆರೋಪ.

ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್ ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ ಎಂದು ಹೇಳಲಾಗಿದೆ.

ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದವರು ನಿನ್ನೆಯೇ ತಗಾದೆ ತೆಗೆದಿದ್ದಾರೆ. ಕೊನೆಗೆ ನಾಗಾರ್ಜುನ ಮನೆಯವರು
ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸ್ ಠಾಣೆಗೆ ಆಗಮಿಸಿರುವ ಚೈತ್ರಾ ಕೊಟ್ಟೂರು, ನಾಗಾರ್ಜುನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಅಂತಾ ನಾಗಾರ್ಜುನ್ ಹೇಳಿದ್ದರೆ, ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆ ಹೋಗುವೆ ಅಂತ ಚೈತ್ರಾ ಕೊಟ್ಟೂರು ಪಟ್ಟು ಹಿಡಿದಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರು ಪರಸ್ಪರ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!