December 26, 2024

Newsnap Kannada

The World at your finger tips!

karineralu

ನಾಲ್ಕು ತಂಡಗಳ ಕೆಲ ಆಟಗಾರರಿಗೆ ಕೊರೋನಾ ಪಾಸಿಟಿವ್ : ಐಪಿಎಲ್ ಪಂದ್ಯಕ್ಕೆ ಕರಿನೆರಳು

Spread the love

ಏಪ್ರಿಲ್ 9 ರಿಂದ ಆರಂಭವಾಗಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಪಂದ್ಯಕ್ಕೆ ಕೊರೊನಾ ಕರಿ ನೆರಳು ಬಿದ್ದಿದೆ.

ಚೆನ್ನೈಸೂಪರ್ ಕಿಂಗ್ಸ್, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಿಗೂ ಕೊರೊನಾ ವಕ್ಕರಿಸಿದೆ.

ಆರ್‌ಸಿಬಿ ತಂಡದ ಓಪನಿಂಗ್​ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್​ಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಐಪಿಎಲ್​ನ ಮೂರನೇ ಆಟಗಾರನಿಗೆ ಪಾಸಿಟಿವ್​ ಬಂದಂತಾಗಿದೆ. ಪಡಿಕ್ಕಲ್​ರ ಸಂಪರ್ಕ ಹೊಂದಿದ್ದ ಆಟಗಾರರು ಮತ್ತು ಸಿಬ್ಬಂದಿಯನ್ನು ಕ್ವಾರಂಟೀನ್​ಗೆ ಒಳಪಡಿಸಲಾಗಿದೆ.

ಪಡಿಕ್ಕಲ್​ಗೆ ಕೋವಿಡ್​-19 ಬಂದಿರುವ ಕಾರಣ, ವಿರಾಟ್​ ಕೊಹ್ಲಿ ಪಡೆಗೆ ಆಘಾತ ಎದುರಾಗಿದೆ. ಪಡಿಕ್ಕಲ್​ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಕ್ವಾರಂಟೀನ್​​ಗೆ ಒಳಪಡಲಿದ್ದು, ಆರಂಭದ ಕೆಲ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಏ.9ರಂದು ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್​​ಸಿಬಿ ಎದುರಿಸಲಿದೆ. ಏಪ್ರಿಲ್​ 3 (ನಿನ್ನೆ) ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆಲ್​ರೌಂಡರ್​ ಅಕ್ಷರ್​ ಪಟೇಲ್​, ಕೆಕೆಆರ್​​ನ ನಿತಿಶ್​ ರಾಣಾ ಮತ್ತು ವಾಂಖೆಡೆ ಸ್ಟೇಡಿಯಂನ 10 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇತ್ತ ಸಿಎಸ್​ಕೆ ಕ್ಯಾಂಪ್​​ನಲ್ಲೂ ಸಿಬ್ಬಂದಿಗೆ ಮಹಾಮಾರಿ ವಕ್ಕರಿಸಿದೆ.

Copyright © All rights reserved Newsnap | Newsever by AF themes.
error: Content is protected !!