- ಪ್ರಯಾಣ ವೆಚ್ಚ 2300 ರು ಗಳು.
- ಪ್ರಯಾಣ ಸಮಯ 1 ಗಂಟೆ 10 ನಿಮಿಷ
ಸಾಂಸ್ಕ್ರತಿಕ ನಗರಿ ಮೈಸೂರಿನಿಂದ ಮಂಗಳೂರಿಗೆ ವಿಮಾನ ಹಾರಾಟ ಇಂದಿನಿಂದ ಆರಂಭವಾಗಿದೆ.
ಏರ್ ಇಂಡಿಯಾ ಅಲೆಯನ್ಸ್ ವಿಮಾನಯಾನ ಸಂಸ್ಥೆಯಿಂದ ವಿಮಾನ ಹಾರಾಟಕ್ಕ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ.ದೇವೇಗೌಡರು ಸೇರಿದಂತ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ವಿಮಾನ ಸಂಚಾರ ಯಾವ ದಿನ ?
- ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಮೈಸೂರಿ ನಿಂದ ಮಂಗಳೂರಿಗೆ ವಿಮಾನ ಹಾರಾಟವಿರುತ್ತದೆ.
- ಬೆಳಿಗ್ಗೆ 11.20 ಕ್ಕೆ ಮೈಸೂರಿನಿಂದ ಹೊರಡುವ ವಿಮಾನ 12.30 ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ 12.55 ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನ 1.55 ಗಂಟೆಗೆ ಮೈಸೂರಿಗೆ ಬಂದು ತಲುಪಲಿದೆ.
- ಮೈಸೂರಿನಿಂದ ಮಂಗಳೂರು ನಗರಕ್ಕೆ 255 ಕಿಲೋ ಮೀಟರ್ ದೂರವಿದೆ. ಬಸ್ಸಿನಲ್ಲಿ ಹೋಗುವುದಾದರೆ 6 ರಿಂದ 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಕಾರ್ ಪ್ರಯಾಣ 5 ಗಂಟೆಯಾಗುತ್ತದೆ.
- ವಿಮಾನ ಸೇವೆ ಬಳಸಿಕೊಂಡರೆ ಕೇವಲ ಒಂದು ಗಂಟೆ ಅವಧಿಯಲ್ಲಿ ಮೈಸೂರಿನಿಂದ ಮಂಗಳೂರು ತಲುಪಬಹುದಾಗಿದೆ.
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ