November 15, 2024

Newsnap Kannada

The World at your finger tips!

agase

ಕೊಲೆಸ್ಟ್ರಾಲ್ ಮಟ್ಟ ಹಾಕಲು ಅಗಸೆ ರಾಮಬಾಣ ( ಅರೋಗ್ಯವೇ ಭಾಗ್ಯ )

Spread the love

ಸೌಮ್ಯ ಸನತ್

soumya sanath b

ಇಂದಿನ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಜನರ ಆಹಾರ ಪದ್ಧತಿ ಹದಗೆಡುತ್ತಿದೆ ಮತ್ತು ಇದು ಹೊಸ ರೋಗಗಳಿಗೆ ಬಲಿಯಾಗಲು ಕಾರಣವಾಗುತ್ತಿದೆ. ಆಹಾರ ಮತ್ತು ಪಾನಿಯಕ್ಕೆ ಸಂಬಂಧಿಸಿದ ತಪ್ಪುಗಳನ್ನು ನಿರಂತರವಾಗಿ ಮಾಡುವುದು ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅವುಗಳಲ್ಲಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಳ ಮತ್ತು ಅದರೊಂದಿಗೆ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವು ಪ್ರಮುಖ ಕಾಯಿಲೆಗಳಾಗಿವೆ. ಇದು ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಆದಾಗ್ಯೂ, ನಮ್ಮ ಆಹಾರ ಮತ್ತು ಜೀವನ ಶೈಲಿಯತ್ತ ಗಮನ ಹರಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯಬಹುದು. ಅಗಸೆ ನಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಇಂದು ತಿಳಿಯೋಣ.

ಸಾವಿರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿರುವ ಅಗಸೆ ಬೀಜಗಳು ಆರೋಗ್ಯಕ್ಕೆ ಭರಪೂರ ಉಪಯೋಗಗಳನ್ನು ನೀಡುತ್ತವೆ. ಹೇರಳವಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಅಗಸೆ ಬೀಜಗಳು ನೋಡಲು ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಬೆಟ್ಟದಷ್ಟು ಉಪಯೋಗಗಳನ್ನು ನೀಡುತ್ತವೆ.ಅಗಸೆ ಬೀಜಗಳನ್ನು “ಆರೋಗ್ಯದ ನಿಧಿ” ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಹಲವು ಸಮಸ್ಯೆಗಳಿಗೆ ರಾಮಬಾಣವಾಗಿರುವ ಈ ಅಗಸೆ ಭೂಮಿಯ ಮೇಲಿನ ಅತ್ಯಂತ ಪೌಷ್ಟಿಕ-ದಟ್ಟವಾದ ಆಹಾರಗಳಲ್ಲಿ ಒಂದು. ಅಗಸೆ ಬೀಜಗಳ ಪ್ರಯೋಜನಗಳು ಯಾವುವು? ಅಗಸೆ ಬೀಜವನ್ನು ಬೀಜವನ್ನು ಹೇಗೆ ಸೇವಿಸಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

ಪ್ರಾಚೀನ ಕಾಲದಿಂದಲೂ ಜನರು ತಮ್ಮ ಆಹಾರದಲ್ಲಿ ಅಗಸೆಯನ್ನು ಬಳಸುತ್ತಿದ್ದಾರೆ. ಅಗಸೆ ಬೀಜಗಳಲ್ಲಿ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು, ಕರಗುವ ಫೈಬ‌ರ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿವೆ. ಈ ಎಲ್ಲಾ ಪೋಷಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.

ಅಗಸೆ ಬೀಜಗಳು ಫೈಬರ್ ನಲ್ಲಿ ಸಮೃದ್ಧವಾಗಿರುವ ಕಾರಣದಿಂದಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗಲು : ಅಗಸೆ ಬೀಜಗಳು LDL (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡುತ್ತದೆ ಮತ್ತು HDL (ಉತ್ತಮ ಕೊಲೆಸ್ಟ್ರಾಲ್) ಅನ್ನು ಸುಧಾರಿಸುತ್ತದೆ, ಇದರಿಂದಾಗಿ ನೀವು ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.

ಬ್ಲಡ್ ಪ್ರೆಶರ್ ಅನ್ನು ನಿಯಂತ್ರಣದಲ್ಲಿ ಇಡಲು :
ಅಗಸೆ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವಾಗಿದ್ದು ಮತ್ತು ಆ್ಯಂಟಿ ಏಜಿಂಗ್ ಗುಣಗಳನ್ನು ಸಹಾ ಇದು ಹೊಂದಿದೆ.

ಪ್ರೋಟೀನ್ ನ ಭಂಡಾರವಾಗಿದೆ : ಅಗಸೆ ಬೀಜಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸಸ್ಯ ಆಧಾರಿತ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ, ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆ.

ಯಕೃತ್ತಿನ ರಕ್ಷಣೆಗೆ : ಅಗಸೆಬೀಜವು ಕಾಮಾಲೆಯಿಂದ ಕೊಬ್ಬಿನ ಯಕೃತ್ತಿನ (ಫ್ಯಾಟಿ ಲಿವರ್) ವರೆಗೆ ಅನೇಕ ಯಕೃತ್ತಿನ ಕಾಯಿಲೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ವಿಶೇಷವಾಗಿ ಅಗಸೆ ಬೀಜದ ಎಣ್ಣೆಯು ಪಿತ್ತ ಮತ್ತು ಪಿತ್ತದ ಹರಳುಗಳನ್ನು ಕಡಿಮೆ ಮಾಡಲು ಉಪಯೋಗಕಾರಿ. ಅಗಸೆಯ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಯಕೃತ್ತು ಶುದ್ದವಾಗುತ್ತದೆ.

ಕ್ಯಾನ್ಸರ್ ರೋಗ ತಡೆಯಲು : ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಇನ್ನಿತರೆ ರೀತಿಯ ಕ್ಯಾನ್ಸರ್ ಅನ್ನು ತಡೆಯಲು ನೆರವನ್ನು ನೀಡುತ್ತದದೆ.

ಚರ್ಮದ ಕಾಂತಿಗೆ : ಅತಿಯಾದ ಬಿಸಿಲು, ಬೆವರು, ಧೂಳು ಹೀಗೆ ಹಲವು ಕಾರಣಗಳಿಂದ ಚರ್ಮದ ಆರೋಗ್ಯ ಕೆಡುವುದು ಸಹಜ. ಇದರಿಂದ ಮೊಡವೆ, ಕಲೆಗಳು, ಸುಕ್ಕು ಮುಂತಾದ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಚರ್ಮದ ಕಾಂತಿ ಕುಗ್ಗತ್ತದೆ. ಇದರ ನಿವಾರಣೆಗೆ ನೀವು ಬ್ಯೂಟಿ ಪಾರ್ಲರ್‌ಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಅಗಸೆ ಬೀಜಗಳಿಂದ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.

ಜರ್ಮನಿಯ ಹೆಡಲ್‌ಬರ್ಗ್‌ನಲ್ಲಿರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಗಸೆ ಬೀಜವನ್ನು ನಿತ್ಯ ಆಹಾರದೊಂದಿಗೆ ಬಳಸುವುದರಿಂದ ಸ್ತನ ಕ್ಯಾನ್ಸರನ್ನು ತಡೆಯಬಹುದು, ಅದರಿಂದ ಸಂಭವಿಸುವ ಶೇ,40ರಷ್ಟು ಮರಣವನ್ನು ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟಿದೆ. ಅಗಸೆ ಬೀಜವನ್ನು ಅರಿಶಿಣ, ಹುಣಸೆಹಣ್ಣು, ಬೆಳ್ಳುಳ್ಳಿ, ಉಪ್ಪು, ಸಕ್ಕರೆ, ಬೇವಿನೆಲೆಗಳೊಂದಿಗೆ ಸೇರಿಸಿ ಊಟಕ್ಕೆ ರುಚಿ ನೀಡುವ ಚಟ್ನಿಹುಡಿಯನ್ನೂ ತಯಾರಿಸಬಹುದು.

ಎಳೆಯ ಕಾಯಿಗಳಿಂದ ಅಲಸಂದೆಯಂತಹ ಸ್ವಾದಿಷ್ಟ ಪಲ್ಯವೂ ಮಾಡಬಹುದು. ಮೆದುಳಿಗೆ ಹರಿಯುವ ರಕ್ತದ ನಾಳಗಳಲ್ಲಿರುವ ತೊಡಕನ್ನು ಅದು ನಿವಾರಿಸುತ್ತದೆ. ರಕ್ತಹೀನತೆ, ಸೋರಿಯಾಸಿಸ್, ಚರ್ಮದ ದಡಿಕೆಗಳಿಗೂ ಔಷಧವಾಗಿ ಉಪಯೋಗಕ್ಕೆ ಬರುತ್ತದೆ. ಶ್ವಾಸಕೋಶದ ಆರೋಗ್ಯವೂ ವೃದ್ಧಿಸುತ್ತದೆ. ಋತುಸ್ರಾವಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಅಗಸೆ ಬೀಜದಿಂದ ತೆಗೆದ ತೈಲ ಅಥವಾ ಚೂರ್ಣ ಒಂದು ಚಮಚ ಪ್ರಮಾಣದಲ್ಲಿ ಊಟಕ್ಕೆ ಮುನ್ನ ದಿನವೂ ಸೇವಿಸುವುದರಿಂದ ಹೃದಯದ ಕಾಯಿಲೆ, ಸಂಧಿವಾತವನ್ನು ತಡೆಯಬಹುದು ಎನ್ನುತ್ತವೆ ಶೋಧನೆಗಳು. ಅದರ ಬೇರು ಕಜ್ಜಿ, ಬೆಂಕಿಯ ಗಾಯಗಳನ್ನು ಮಾತ್ರವಲ್ಲ ಮೈಕೈ ನೋವು, ಗಂಟಲು ನೋವುಗಳನ್ನು ಗುಣಪಡಿಸುತ್ತದೆ.

ಅಗಸೆಯ ಹೂಗಳು ಕಫ, ಪಿತ್ತ ನಿವಾರಕ ಗುಣ ಹೊಂದಿವೆ. ಇದರ ರಸ ಸೇವನೆ ಗಂಟಲಿನ ಧ್ವನಿಯನ್ನು ಶುದ್ಧಗೊಳಿಸುತ್ತದೆ. ರೋಗನಿರೋಧಕವಾಗಿರುವ ಹೂಗಳಿಗೆ ತಲೆನೋವು, ಶೀತ, ಜ್ವರಗಳನ್ನು ಗುಣಪಡಿಸುವ ಶಕ್ತಿಯಿದೆ. ಒಂದೇ ಕೆನ್ನೆ ಸಿಡಿತದ ಬಾಧೆಯಿರುವವರು ಅದರ ವಿರುದ್ಧ ದಿಕ್ಕಿನ ಮೂಗಿನ ಹೊರಳೆಯಲ್ಲಿ ನಾಲ್ಕಾರು ಹನಿ ಹೂವಿನ ರಸ ಹಾಕಿದರೆ ಕಫ ಇಳಿದು ನೋವು ತಗ್ಗುತ್ತದೆ ಎಂದಿದೆ ಆಯುರ್ವೇದ.

ಪ್ರತಿದಿನ ಎಷ್ಟು ಅಗಸೆ ತಿನ್ನಬೇಕು?

ಆರೋಗ್ಯ ತಜ್ಞರ ಪ್ರಕಾರ, ದೈನಂದಿನ ಆಹಾರದಲ್ಲಿ ಒಂದು ಚಮಚ ಅಗಸೆಯನ್ನು ಸೇವಿಸಬೇಕು. ಎಂದಿಗೂ ಕಚ್ಚಾ ತಿನ್ನಬಾರದು. ಮೊದಲು ಸ್ವಲ್ಪ ಹುರಿದು ನಂತರ ತಿನ್ನಬೇಕು. ಅದರ ಪ್ರಯೋಜನಗಳನ್ನು ಪಡೆಯಲು, ಅದನ್ನು ಸರಿಯಾದ ರೂಪದಲ್ಲಿ ಸೇವಿಸಬೇಕು. ಇತರ ಒಣ ಹಣ್ಣುಗಳು ಮತ್ತು ಸಂಪೂರ್ಣ ಬೀಜಗಳೊಂದಿಗೆ ಇದನ್ನು ಹುರಿದು ಸೇವಿಸಬಹುದು. ಅಗಸೆ ಬೀಜವನ್ನು ಹುರಿದು, ರುಬ್ಬಿ, ಸ್ಫೂಥಿಗಳಲ್ಲಿ ಬೆರೆಸಿ, ಹಲ್ವಾ, ಗಂಜಿ, ಲಾಡು ಮಾಡಬಹುದು. ಶುದ್ಧ ಮೊಸರು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಬಹುದು. ಕೊಲೆಸ್ಟ್ರಾಲ್, ಬಿಪಿ, ಹೃದಯಾಘಾತ ಮುಂತಾದ ಕಾಯಿಲೆಗಳಿದ್ದರೆ ಪ್ರತಿದಿನ ಒಂದರಿಂದ ಎರಡು ಚಮಚ ಅಗಸೆ ಎಣ್ಣೆಯು ಪ್ರಯೋಜನಕಾರಿಯಾಗಿದೆ. ಆದರೆ ಅಗಸೆ ಎಣ್ಣೆಯನ್ನು ಹೆಚ್ಚು ಬಳಸಬಾರದು. ಇದರ ಅತಿಯಾದ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇರೆ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಯಾವುದೇ ಔಷದಿ ತೆಗೆದುಕೊಳ್ಳುತ್ತಿದ್ದರೆ, ವೈದ್ಯರ ಸಲಹೆಯ ಮೇರೆಗೆ ಅಗಸೆ ಬೀಜಗಳನ್ನು ಸೇವಿಸಬೇಕು

Copyright © All rights reserved Newsnap | Newsever by AF themes.
error: Content is protected !!