December 25, 2024

Newsnap Kannada

The World at your finger tips!

delhi terr

ನವದೆಹಲಿಯಲ್ಲಿ ಐವರು ಉಗ್ರರ ಬಂಧನ‌

Spread the love

ದೆಹಲಿ ಪೊಲೀಸರ ವಿಶೇಷ ತಂಡವು ಸೋಮವಾರ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರರ ಜೊತೆ ಗುಂಡಿನ ಕಾಳಗದ ನಂತರ ಅವರೆಲ್ಲರನ್ನೂ ಬಂಧಿಸಲಾಗಿದೆ

ಬಂಧಿತ ಐವರು ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು ಕಾಶ್ಮೀರದವರು ಎಂದು ತಿಳಿದುಬಂದಿದೆ.

ಬಂಧಿತ ಐವರು ಖಲಿಸ್ತಾನ್ ನ ಸಂಪರ್ಕ ಇದೆ ಎಂದು ಶಂಕಿಸಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಮಧ್ಯೆ, ಭಯೋತ್ಪಾದಕರ ಬಂಧನದ ಹಿನ್ನೆಲೆಯಲ್ಲಿ ನಗರ ಪೊಲೀಸರು ನಿಗಾವನ್ನು ತೀವ್ರಗೊಳಿಸಿದ್ದಾರೆ.

ನವೆಂಬರ್ ನಲ್ಲಿ ದೆಹಲಿ ಪೊಲೀಸರ ವಿಶೇಷ ದಳವು ಸರಾಯಿ ಕಾಳೆ ಖಾನ್ ಬಳಿ ಜೈಷ್ ಇ ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿತ್ತು. ಮತ್ತೆ ದೆಹಲಿಯಲ್ಲಿ ಅಡಗಿ ಕುಳಿತಿರುವ ಕೆಲವರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!